ವಿಜಯದೇವರಕೊಂಡಗೆ ತಲೆಬಿಸಿ ಮಾಡ್ತಿದ್ದಾರೆ ಸಮಂತಾ, ಯಾಕೆ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಜಯ್ ದೇವರಕೊಂಡ ಹಾಗೂ ಸಮಂತಾ ಅಭಿನಯದ ಖುಷಿ ಸಿನಿಮಾ ಅನೌನ್ಸ್ ಆಗಿ ತಿಂಗಳುಗಳೇ ಕಳೆದಿವೆ.

ಸಿನಿಮಾದಲ್ಲಿ ಸಮಂತಾ ಒಪ್ಪಿಕೊಂಡಿದ್ದ ಡೇಟ್ಸ್‌ಗೆ ಸರಿಯಾಗಿ ಶೂಟಿಂಗ್‌ಗೆ ಹಾಜರಾಗಿಲ್ಲ. ಇದರಿಂದ ಸಿಕ್ಕಾಪಟ್ಟೆ ತಲೆಬಿಸಿ ಆಗ್ತಿದೆ ಅಂತಿದ್ದಾರೆ ವಿಜಯ್. ಆದರೆ ಸಮಂತಾ ಅನಾರೋಗ್ಯದಿಂದ ವಿದೇಶಕ್ಕೆ ತೆರಳಿದ್ದು, ಅಲ್ಲಿಂದ ಬಂದಮೇಲೆ ಮಿಸ್ ಆಗದಂತೆ ಮೊದಲು ಶೂಟ್‌ಗೆ ಬರುತ್ತೀನಿ ಅಂತಿದ್ದಾರೆ ಸಮಂತಾ.

ಈ ಹಿಂದೆ ಮಹಾನಟಿ ಸಿನಿಮಾದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದು, ಇವರ ಮಧ್ಯೆ ಉತ್ತಮ ಸ್ನೇಹ ಇದೆ. ಇದೀಗ ಖುಷಿ ಸಿನಿಮಾದಲ್ಲಿ ಇಬ್ಬರೂ ಒಟ್ಟಿಗೇ ನಟಿಸುತ್ತಿದ್ದು, ಅಭಿಮಾನಿಗಳ ಕಾತರರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!