ಮತ್ತೆ ಒಂದಾಗ್ತಾರಾ ಸಮಂತಾ-ನಾಗಚೈತನ್ಯ? ವಿಚ್ಛೇದನದ ಪೋಸ್ಟ್ ಡಿಲೀಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ಸಮಂತಾ ಹಾಗೂ ನಾಗಚೈತನ್ಯ ವಿಚ್ಛೇದನದ ಸುತ್ತ ಹಲವು ಊಹಾಪೋಹಗಳು ಎದ್ದಿದ್ದವು.
ಇದೀಗ ಎಲ್ಲವೂ ತಣ್ಣಗಾಗಿದ್ದು, ಇಬ್ಬರೂ ತಮ್ಮ ಕೆಲಸಗಳ ಬಗ್ಗೆ ಗಮನ ಹರಿಸಿದ್ದರು.
ಆದರೆ ಸಮಂತಾರ ನಡೆಯಿಂದಾಗಿ ಇವರಿಬ್ಬರೂ ಮತ್ತೆ ಒಂದಾಗ್ತಿದ್ದಾರಾ ಅನ್ನೋ ಅನುಮಾನ ಎಲ್ಲರನ್ನೂ ಕಾಡುತ್ತಿದೆ.
ಸಮಂತಾ ಟ್ವಿಟರ್‌ನಲ್ಲಿ ಡಿವೋರ್ಸ್‌ಗೂ ಮುನ್ನ ತಮ್ಮ ಹೆಸರಿನ ಮುಂದಿದ್ದ ಅಕ್ಕಿನೇನಿ ತೆಗೆದು ಹಾಕಿದ್ದರು. ಇದೀಗ ಸಮಂತಾ ತಾವು ಡಿವೋರ್ಸ್ ಮಾಡುತ್ತಿದ್ದೇವೆ ಎಂದು ಬರೆದುಕೊಂಡಿದ್ದ ಪೋಸ್ಟ್‌ನ್ನು ಕೂಡ ಡಿಲೀಟ್ ಮಾಡಿದ್ದಾರೆ.
ಏಕಾಏಕಿ ಡಿವೋರ್ಸ್ ಪೋಸ್ಟ್ ಡಿಲೀಟ್ ಆಗಿರುವ ಕಾರಣ ಇವರಿಬ್ಬರು ಮತ್ತೆ ಒಂದಾಗಬಹುದು ಎನ್ನುವ ಭರವಸೆಯಲ್ಲಿ ಅಭಿಮಾನಿಗಳು ಇದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!