ಸಮಂತಾ ಅಭಿಮಾನಿಗಳಿಗೆ ನಿರಾಸೆ: ಶಾಕುಂತಲಾ ಸಿನಿಮಾ ರಿಲೀಸ್‌ ಮತ್ತೆ ಮುಂದಕ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಗುಣಶೇಖರ್ ನಿರ್ದೇಶನದ ಪೌರಾಣಿಕ ಚಿತ್ರ ‘ಶಾಕುಂತಲಂ’ ಟಾಲಿವುಡ್‌ನಲ್ಲಿ ತಯಾರಾಗುತ್ತಿರುವ ಪ್ರತಿಷ್ಠಿತ ಚಿತ್ರಗಳಲ್ಲಿ ಒಂದಾಗಿದೆ. ಗುಣಶೇಖರ್ ಈ ಚಿತ್ರವನ್ನು ಬಹಳ ಪ್ರತಿಷ್ಠೆಯಾಗಿ ನಿರ್ದೇಶಿಸುತ್ತಿದ್ದು, ತಮ್ಮ ಹೋಮ್ ಬ್ಯಾನರ್‌ನಲ್ಲಿ ಅತ್ಯಂತ ದೊಡ್ಡ ಬಜೆಟ್‌ನಲ್ಲಿ ನಿರ್ಮಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಸ್ಟಾರ್ ಬ್ಯೂಟಿ ಸಮಂತಾ ನಾಯಕಿಯಾಗಿ ನಟಿಸುತ್ತಿದ್ದು, ಈ ಸಿನಿಮಾ ಹೇಗಿರುತ್ತೆ ಅಂತ ಎಲ್ಲರೂ ಕಾತರದಿಂದ ನೋಡ್ತಿದ್ದಾರೆ.

ಈ ಸಿನಿಮಾ ಈಗಾಗಲೇ ಹಲವು ಬಾರಿ ಮುಂದೂಡಿಕೆಯಾಗಿದೆ. ಈ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿರುವಾಗಲೇ ನವೆಂಬರ್ 4 ರಂದು ಈ ಚಿತ್ರ ವಿಶ್ವಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಬಹಿರಂಗಪಡಿಸಿತ್ತು.

ಆದರೆ, ಮತ್ತೊಮ್ಮೆ ಶಾಕುಂತಲಂ ಚಿತ್ರತಂಡ ಪ್ರೇಕ್ಷಕರಿಗೆ ನಿರಾಸೆ ಉಂಟುಮಾಡಿದೆ. ಈ ಸಿನಿಮಾವನ್ನು 3ಡಿಯಲ್ಲಿ ಬಿಡುಗಡೆ ಮಾಡಲು ಕಸರತ್ತು ನಡೆಸುತ್ತಿದ್ದು, ಈ ಸಿನಿಮಾದ ಸಂಪೂರ್ಣ ಅನುಭವ ಎಲ್ಲರಿಗೂ ಸಿಗಲಿ ಎಂದು ಮತ್ತೊಮ್ಮೆ ಈ ಸಿನಿಮಾದ ಬಿಡುಗಡೆ ದಿನಾಂಕವನ್ನು ಮುಂದೂಡುತ್ತಿದ್ದೇವೆ ಎಂದು ಚಿತ್ರತಂಡ ಹೇಳಿದೆ. ಹೀಗೆ ಮುಂದೂಡುತ್ತಿರುವುದರಿಂದ ರೊಚ್ಚಿಗೆದ್ದ ಪ್ರೇಕ್ಷಕರು ಈ ಸಿನಿಮಾ ರಿಲೀಸ್‌ ಮಾಡುವ ಮನಸಿದ್ಯಾ ಅಥವಾ ಹೀಗೆ ಮುಂದೂಡುತ್ತಲೇ ಇರುತ್ತೀರಾ ಎಂದು ಗುಣಶೇಖರ್ ಅಂಡ್ ಟೀಮ್ ಮೇಲೆ ಗರಂ ಆಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!