Thursday, December 1, 2022

Latest Posts

‘ಯಶೋದಾ’ ಸಿನಿಮಾ ಕುರಿತು ಸಮಂತಾ ವಿಶೇಷ ಟ್ವೀಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಹಳ ಗ್ಯಾಪ್‌ನ ನಂತರ ಸಮಂತಾ ‘ಯಶೋದಾ’ ಲೇಡಿ ಓರಿಯೆಂಟೆಡ್ ಸಿನಿಮಾದೊಂದಿಗೆ ಬರುತ್ತಿದ್ದಾರೆ. ತಮಿಳು ನಿರ್ದೇಶಕ ಹರಿ-ಹರೀಶ್ ಅವರ ನಿರ್ದೇಶನದಲ್ಲಿ, ಶ್ರೀದೇವಿ ಮೂವೀಸ್ ಬ್ಯಾನರ್‌ನಡಿಯಲ್ಲಿ ಶಿವಲೆಂಕ ಕೃಷ್ಣಪ್ರಸಾದ್ ಯಶೋದಾ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಸಮಂತಾ ಮುಖ್ಯ ಭೂಮಿಕೆಯಲ್ಲಿ ಯಶೋದಾ ಸಿನಿಮಾ ನವೆಂಬರ್ 11 ರಂದು ಭಾರತದಾದ್ಯಂತ ಬಿಡುಗಡೆಯಾಗಲಿದೆ. ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದೆ.

ಯಶೋದಾ ಪ್ರಚಾರದ ಭಾಗವಾಗಿ ಸಮಂತಾ ಚಿತ್ರದ ಬಗ್ಗೆ ವಿಶೇಷ ಟ್ವೀಟ್ ಮಾಡಿದ್ದಾರೆ. “ತುಂಬಾ ಭಯ ಮತ್ತು ಆತಂಕ. ಯಶೋದಾ ಬಿಡುಗಡೆಗೆ ಒಂದೇ ದಿನವಿದೆ. ನಿಮ್ಮೆಲ್ಲರಿಗೂ ಯಶೋದಾ ಇಷ್ಟವಾಗುತ್ತಾರೆ ಎಂದು ಭಾವಿಸುತ್ತೇವೆ. ನಮ್ಮ ನಿರ್ದೇಶಕರು ಮತ್ತು ನಿರ್ಮಾಪಕರು ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್. ನಾಳೆ ಫಲಿತಾಂಶಕ್ಕಾಗಿ ನಾವೆಲ್ಲರೂ ಕಾಯುತ್ತಿದ್ದೇವೆ. ಸಿನಿಮಾ ನಮ್ಮನ್ನು ದಾಟಿ ನಿಮ್ಮ ಮುಂದೆ ಬರಲಿದೆ” ಎಂದು ಪೋಸ್ಟ್ ಮಾಡಿದ್ದಾರೆ. ಸಮಂತಾ ಮಾಡಿರುವ ಈ ಟ್ವೀಟ್ ವೈರಲ್ ಆಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!