ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಮಂತಾ ಸದ್ಯ ಸಿನಿಮಾಗಳಿಂದ ಬಿಡುವು ಮಾಡಿಕೊಂಡು ಮಯೋಸಿಟಿಸ್ ಚಿಕಿತ್ಸೆಗಾಗಿ ಅಮೆರಿಕಕ್ಕೆ ಹೋಗಿದ್ದಾರೆ. ಮಯೋಸಿಟಿಸ್ ಸಂಪೂರ್ಣವಾಗಿ ಗುಣಮುಖವಾಗುವವರೆಗೆ ಕೆಲವು ತಿಂಗಳು ಅಮೆರಿಕದಲ್ಲೇ ಚಿಕಿತ್ಸೆ ಪಡೆದು, ಚೇತರಿಸಿಕೊಂಡು ಪೂರ್ಣ ಆರೋಗ್ಯದಿಂದ ಭಾರತಕ್ಕೆ ಮರಳಲು ನಿರ್ಧರಿಸಿದ್ದಾರೆ. ಅಮೆರಿಕಾದಲ್ಲಿದ್ದರೂ ಸಹ, ಸಮಂತಾ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ, ಅವರು ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ಫೋಟೋಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದರು.
ಆ ಬಳಿಕ ಇನ್‌ಸ್ಟಾಗ್ರಾಮ್‌ನಲ್ಲಿ ಅಭಿಮಾನಿಗಳೊಂದಿಗೆ ಸಂವಾದ ನಡೆಸಿ, ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ವಿಡಿಯೋ ಮೂಲಕ ಉತ್ತರಿಸಿದ್ದಾರೆ. ಈ ವೇಳೆ ಇಂದಿನ ಯುವಕರಿಗೆ ನೀವು ಏನಾದರೂ ಸಲಹೆ ನೀಡುತ್ತೀರಾ ಎಂದು ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಸ್ಯಾಮ್ ಉತ್ತರಿಸಿದರು.
ʻಇಂದಿನ ಯುವಜನತೆ ಸಣ್ಣ ಪುಟ್ಟ ಸಮಸ್ಯೆಗಳಿಂದ ನರಳುತ್ತಿದ್ದಾರೆ. ಜೀವನ ಇನ್ನೂ ಪ್ರಾರಂಭವಾಗಿಲ್ಲ. ಸಣ್ಣ ವಿಷಯಗಳ ಬಗ್ಗೆ ಚಿಂತಿಸುವುದನ್ನು ನಿಲ್ಲಿಸಿ. ನಿಮ್ಮ ಪ್ರಯಾಣದಲ್ಲಿ ಅನೇಕ ತೊಂದರೆಗಳು ಮತ್ತು ಸಮಸ್ಯೆಗಳಿರಬಹುದು. ನೀವು ಅವೆಲ್ಲವನ್ನೂ ತಡೆದುಕೊಳ್ಳುವ ಸಾಮರ್ಥ್ಯ ಹೊಂದಿರಬೇಕುʼ. ಎಂದರು.
ನಾವು ಧೈರ್ಯವಂತರಾಗಿದ್ದರೆ ಮಾತ್ರ ಜೀವನದ ಬಗ್ಗೆ ಪಾಠ ಕಲಿಯಬಹುದು. ನಾನು 25 ವರ್ಷದವಳಿದ್ದಾಗ ಆ ಸ್ಥಾನದಲ್ಲಿ ಇರುತ್ತೇನೆ ಅಂದುಕೊಂಡಿರಲಿಲ್ಲ. ನನ್ನ ಜೀವನದಲ್ಲಿ ನಾನು ಇಷ್ಟು ಕಷ್ಟಗಳನ್ನು ಎದುರಿಸುತ್ತೇನೆ ಎಂದು ನಾನು ಎಂದಿಗೂ ಯೋಚಿಸಲಿಲ್ಲ. ಅವೆಲ್ಲವನ್ನೂ ಸಕಾರಾತ್ಮಕವಾಗಿ ಎದುರಿಸಿದ್ದೇನೆ. ನೀವೂ ಹಾಗೆಯೇ ಮುನ್ನಡೆಯಬೇಕು ಎಂದರು. ಸ್ಯಾಮ್ ಅವರ ಕಾಮೆಂಟ್‌ಗಳು ವೈರಲ್ ಆಗಿವೆ.