September 10, 2026
Thursday, September 10, 2026
spot_img

ಕಷ್ಟಗಳನ್ನೆಲ್ಲಾ ಮೆಟ್ಟಿ ನಿಂತು ನೂರು ಕೋಟಿ ಗೆದ್ದ ಸಮಂತಾ: ಇದು ಬರಿ ಸಿನಿಮಾವಲ್ಲ, ರಿಯಲ್ ಕಮ್‌ಬ್ಯಾಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬದುಕಿನಲ್ಲಿ ಸಾಲು ಸಾಲು ಏಟು ಬಿದ್ದಾಗ ಯಾರು ತಾನೆ ಕುಗ್ಗಿ ಹೋಗಲ್ಲ ಹೇಳಿ? ಸಾಮಾನ್ಯ ಜನರೇ ಧೂಳು ಕೊಡವಿಕೊಂಡು ಏಳೋದು ಕಷ್ಟ, ಅಂಥದ್ರಲ್ಲಿ ಇಡೀ ದೇಶವೇ ತಿರುಗಿ ನೋಡೋ ನಟಿ ಸಮಂತಾ ಅನುಭವಿಸಿದ ನೋವು ಸಣ್ಣದಲ್ಲ. ನಾಗ ಚೈತನ್ಯ ಜೊತೆಗಿನ ನಾಲ್ಕು ವರ್ಷದ ಸಂಸಾರ ಮುರಿದುಬಿದ್ದಾಗ ಒಂದು ಕಡೆ ಮನಸ್ಸಿಗೆ ಗಾಯ. ಇನ್ನೊಂದೆಡೆ 2022ರಲ್ಲಿ ಬಂದು ಅಪ್ಪಳಿಸಿದ ‘ಮಯೋಸೈಟಿಸ್’ ಅನ್ನೋ ಕೆಟ್ಟ ಕಾಯಿಲೆ. ಬಾಡಿ ಸಪೋರ್ಟ್ ಮಾಡ್ತಿರ್ಲಿಲ್ಲ, ಡಾಕ್ಟರ್‌ಗಳು ಸರಳ ಜೀವನ ನಡೆಸಿ ಎಂದು ಅಡ್ವೈಸ್ ಮಾಡಿದ್ರು. ಸಾಕಪ್ಪಾ ಈ ಗ್ಲಾಮರ್ ಪ್ರಪಂಚ, ಹಾಯಾಗಿ ಬಿಸಿನೆಸ್ ಮಾಡ್ಕೊಂಡು ತೆರೆಮರೆಯಲ್ಲೇ ಇರೋಣ ಎಂದು ಬಣ್ಣದ ಲೋಕಕ್ಕೆ ಗುಡ್‌ಬೈ ಹೇಳೋಕೆ ಸಮಂತಾ ಫಿಕ್ಸ್ ಆಗಿಬಿಟ್ಟಿದ್ರು.

ಸಿನಿಮಾದಿಂದ ಗ್ಯಾಪ್ ತಗೊಂಡು ಬಿಸಿನೆಸ್ ಫೀಲ್ಡ್‌ಗೆ ಧುಮುಕಿದ ಸಮಂತಾ, ಅಲ್ಲೂ ತಮ್ಮ ಬುದ್ಧಿವಂತಿಕೆ ತೋರಿಸಿ ಸಕ್ಸಸ್‌ಫುಲ್ ಬಿಸಿನೆಸ್ ವುಮನ್ ಎನಿಸಿಕೊಂಡ್ರು. ಕೈತುಂಬಾ ಇನ್ವೆಸ್ಟ್‌ಮೆಂಟ್, ಓಡಾಟ ಕಮ್ಮಿ, ಶೋಕಿ ಇಲ್ಲದ ಲೈಫ್. ಎಲ್ಲವೂ ಅಂದುಕೊಂಡಂತೆಯೇ ಸಾಗ್ತಿತ್ತು. ‘ಮಾ ಇಂಟಿ ಬಂಗಾರಂ’ ಎಂಬ ಒಂದು ಒಳ್ಳೆ ಕಥೆ ಸಿಕ್ಕಾಗ, ತಾನೇ ದುಡ್ಡು ಹಾಕಿ ಪ್ರೊಡಕ್ಷನ್ ಮಾಡೋಣ, ನಟಿಸೋದು ಬೇಡ ಎಂದು ಅಂದ್ಕೊಂಡಿದ್ರು. ಆದ್ರೆ ವಿಧಿ ಬರೆದ ಆಟವೇ ಬೇರೆ ಇತ್ತು.

ನಿರ್ದೇಶಕ ರಾಜ್ ನಿಡಿಮೋರು ಸಮಂತಾ ಅವರ ಕೈ ಹಿಡಿದು, “ಈ ಕ್ಯಾರೆಕ್ಟರ್‌ಗೆ ನೀವೇ ಸೂಟ್ ಆಗೋದು, ಆಕ್ಟ್ ಮಾಡಲೇಬೇಕು” ಎಂದು ಪಟ್ಟು ಹಿಡಿದು ಕೂತರು. ಮೊದಲು ಸಮಂತಾಗೆ ಭಯ ಇತ್ತು, ಒಪ್ಪಿಕೊಳ್ಳೋಕೆ ಹಿಂದೇಟು ಹಾಕಿದ್ರು. ಕೊನೆಗೆ ರಾಜ್ ಒತ್ತಾಯಕ್ಕೆ ಮಣಿದು ಕ್ಯಾಮೆರಾ ಮುಂದೆ ನಿಂತರು. ಆಮೇಲೆ ನಡೆದಿದ್ದೆಲ್ಲಾ ಹಿಸ್ಟರಿ.

ಸಿನಿಮಾ ರಿಲೀಸ್ ಆಯ್ತು. ಥಿಯೇಟರ್‌ನಲ್ಲಿ ಜನ ಎದ್ದು ನಿಂತು ಚಪ್ಪಾಳೆ ತಟ್ಟಿದ್ರು. ತೆಲುಗು ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಸಿನಿಮಾವೊಂದು ನೂರು ಕೋಟಿ ಕಲೆಕ್ಷನ್ ಮಾಡೋದು ಸಣ್ಣ ವಿಷಯವಲ್ಲ. ಸಮಂತಾ ಅವರ ಈ ಭರ್ಜರಿ ಕಮ್‌ಬ್ಯಾಕ್ ಸಿನಿಮಾ ‘ಮಾ ಇಂಟಿ ಬಂಗಾರಂ’ ಇಡೀ ಸೌತ್ ಇಂಡಿಯಾದಲ್ಲೇ ಹೊಸ ದಾಖಲೆ ಬರೆಯಿತು.

ಕಾಯಿಲೆಗೆ ಹೆದರಿ ಹಿಂದೆ ಸರಿಯದೆ, ಬಿದ್ದ ಜಾಗದಲ್ಲೇ ಎದ್ದು ನಿಂತು ನೂರು ಕೋಟಿಯ ಸಾಮ್ರಾಜ್ಯ ಕಟ್ಟಿದ ಸಮಂತಾ ಅವರ ಈ ಜರ್ನಿ ಇದೆಯಲ್ಲ… ಇದು ಬರಿ ಸಿನಿಮಾದ ಕಥೆಯಲ್ಲ, ಪ್ರತಿಯೊಬ್ಬರಿಗೂ ಸ್ಪೂರ್ತಿ ನೀಡೋ ರಿಯಲ್ ಲೈಫ್ ಸಕ್ಸಸ್ ಸ್ಟೋರಿ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !