Thursday, July 7, 2022

Latest Posts

ಫಿಟ್‌ನೆಸ್‌ಗಾಗಿ ಜಿಮ್‌ನಲ್ಲಿ ಸ್ಯಾಮ್‌ ಭಾರೀ ಕಸರತ್ತು..!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಾಗಚೈತನ್ಯರಿಂದ ವಿಚ್ಛೇದನ ಪಡೆದ ಬಳಿಕ ಬ್ಯೂಟಿ ಕ್ವೀನ್ ಸಮಂತಾ ಸದ್ಯ ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಟಾಲಿವುಡ್‌ನಲ್ಲಿ ಮಾತ್ರವಲ್ಲದೆ ಇತರೆ ಭಾಷೆಗಳಲ್ಲೂ ಸಮಂತಾ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಪುಷ್ಪ ಸಿನಿಮಾದಲ್ಲಿ ಊ ಅಂಟಾವಾ ಮಾವಾ..ಉಹೂ ಅಂಟಾವಾ ಮಾವಾ ಹಾಡಿಗೆ ನೃತ್ಯ ಮಾಡಿ ಪಡ್ಡೆ ಹುಡುಗರ ಮನಗೆದ್ದಿದ್ದ ಸ್ಯಾಮ್‌, ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.

ಸದಾ ಫಿಟ್‌ನೆಸ್‌ನಲ್ಲಿ ಮುತುವರ್ಜಿ ವಹಿಸುವ ಸಮಂತಾ ಜಿಮ್‌ನಲ್ಲಿ ಕಸರತ್ತು ನಡೆಸುತ್ತಿರುವ ವಿಡಿಯೋವನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 2022-23ನೇ ವರ್ಷವು ತನ್ನ ದೇಹ ಮತ್ತು ಮನಸ್ಸಿಗೆ ತುಂಬಾ ಸವಾಲಿನ ವರ್ಷವಾಗಿದೆ ಎಂಬ ಕ್ಯಾಪ್ಷನ್‌ ಕೂಡಾ ನೀಡಿದ್ದಾರೆ. ಜಿಮ್‌ನಲ್ಲಿ ಈ ರೀತಿಯ ತೂಕವನ್ನು ಎತ್ತುವ ಮತ್ತು ವರ್ಕೌಟ್ ಮಾಡುವ ಸಮಂತಾ, ತಮ್ಮ ಅಭಿಮಾನಿಗಳು ಕೂಡ ಫಿಟ್ ಆಗಿರಬೇಕೆಂದು ಬಯಸುತ್ತಾರೆ. ತಜ್ಞರ ಮೇಲ್ವಿಚಾರಣೆಯಲ್ಲಿ ಮಾತ್ರ ಅಂತಹ ಭಾರವಾದ ತಾಲೀಮುಗಳನ್ನು ಮಾಡುವಂತೆ ಸೂಚಿಸಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss