ʻಯಶೋದಾʼ ಮೊದಲ ದಿನದ ಕಲೆಕ್ಷನ್ಸ್‌ ಹೇಗಿದೆ ಗೊತ್ತಾ? ಸಮಂತಾಗೆ ಪ್ಲಸ್‌ ಆಗತ್ತಾ ಸಿನಿಮಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಹಳ ಗ್ಯಾಪ್ ನಂತರ ಸಮಂತಾ ‘ಯಶೋದಾ’ ಎಂಬ ಲೇಡಿ ಓರಿಯೆಂಟೆಡ್ ಚಲನಚಿತ್ರದೊಂದಿಗೆ ಕಮ್ ಬ್ಯಾಕ್ ಆಗಿದ್ದಾರೆ. ತಮಿಳು ನಿರ್ದೇಶಕರಾದ ಹರಿ-ಹರೀಶ್ ಅವರ ನಿರ್ದೇಶನದಲ್ಲಿ, ಶ್ರೀದೇವಿ ಮೂವೀಸ್ ಬ್ಯಾನರ್‌ನಡಿಯಲ್ಲಿ ಶಿವಲೆಂಕ ಕೃಷ್ಣಪ್ರಸಾದ್ ಯಶೋದಾ ಚಿತ್ರವನ್ನು ನಿರ್ದೇಶಿಸಿದ್ದು, ಸಮಂತಾ ಮುಖ್ಯ ನಾಯಕಿಯಾಗಿದ್ದಾರೆ. ಯಶೋದಾ ಚಿತ್ರ ನವೆಂಬರ್ 11 ರಂದು ಭಾರತದಾದ್ಯಂತ ಬಿಡುಗಡೆಯಾಗಿದೆ.

ಯಶೋದಾ ಚಿತ್ರಕ್ಕೆ ಮೊದಲ ದಿನವೇ ಒಳ್ಳೆ ಪಾಸಿಟಿವ್ ಟಾಕ್ ಸಿಕ್ಕಿದೆ. ಟ್ವಿಸ್ಟ್‌ಗಳ ಜೊತೆಗೆ ಸಮಂತಾ ಅಭಿನಯ ರೋಮಾಂಚನಕಾರಿ ಎನ್ನುತ್ತಾರೆ ಸಿನಿಮಾ ನೋಡಿದವರು. ಟ್ರೇಡ್ ಮೂಲಗಳ ಪ್ರಕಾರ ಯಶೋದಾ ಸಿನಿಮಾ ಎರಡು ತೆಲುಗು ರಾಜ್ಯಗಳಲ್ಲಿ ಸುಮಾರು 12 ಕೋಟಿ, ಹಿಂದಿಯಲ್ಲಿ 3 ಕೋಟಿ, ರೆಸ್ಟಾಫ್ ಇಂಡಿಯಾದಲ್ಲಿ 1 ಕೋಟಿ ಮತ್ತು ವಿದೇಶದಲ್ಲಿ 2.5 ಕೋಟಿ ರೂ. ಥಿಯೇಟರ್ ಹಕ್ಕುಗಳು ಮಾರಾಟವಾಗಿವೆ. ಯಶೋದಾ ಚಿತ್ರಕ್ಕೆ ಸುಮಾರು 18.5 ಕೋಟಿಯಷ್ಟು ಪ್ರೀ ರಿಲೀಸ್ ಬ್ಯುಸಿನೆಸ್ ನಡೆದಿದೆ. ಯಶೋದಾ ಸಿನಿಮಾ ಹಿಟ್ ಆಗಬೇಕಾದರೆ ಜಗತ್ತಿನಾದ್ಯಂತ 20 ಕೋಟಿ ಶೇರ್ ಕಲೆಕ್ಷನ್ ಬರಬೇಕು.

ಸಮಂತಾ ಅವರ ಯಶೋದಾ ಸಿನಿಮಾ ಮೊದಲ ದಿನವೇ ವಿಶ್ವದಾದ್ಯಂತ 6.32 ಕೋಟಿ ಗಳಿಸಿದೆ. ಸುಮಾರು 3 ಕೋಟಿಯಷ್ಟು ಷೇರು ಕಲೆಕ್ಷನ್ ಮಾಡಿದೆ. ಯಶೋದಾ ಚಿತ್ರ ತೆಲುಗು ರಾಜ್ಯಗಳಲ್ಲಿ 1.7 ಕೋಟಿ ವರೆಗೆ ಶೇರ್ ಕಲೆಕ್ಷನ್ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಫೀಮೇಲ್ ಓರಿಯೆಂಟೆಡ್ ಸಿನಿಮಾಗಳಲ್ಲಿ ಈ ಕಲೆಕ್ಷನ್ ಹೆಚ್ಚು ಎಂದು ಹೇಳಬಹುದು ಆದರೆ, ಸಿನಿಮಾವನ್ನು ಹೆಚ್ಚು ಪ್ರಚಾರ ಮಾಡದ ಕಾರಣ ಚಿತ್ರದ ಕಲೆಕ್ಷನ್ ಕಡಿಮೆಯಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ವಾರಾಂತ್ಯದಲ್ಲಿ ಎರಡು ದಿನಗಳು ಮುಗಿಯುವ ಮುನ್ನವೇ 10 ಕೋಟಿ ಷೇರು ಕಲೆಕ್ಷನ್ ಸುಲಭವಾಗಿ ದಾಟುವ ನಿರೀಕ್ಷೆ ಇದೆ. ಸದ್ಯ ದೊಡ್ಡ ಸಿನಿಮಾಗಳು ತೆರೆಯಲ್ಲಿ ಇಲ್ಲದ ಹಿನ್ನೆಲೆಯಲ್ಲಿ ಸಮಂತಾ ಯಶೋದಾ ಸಿನಿಮಾ ಪ್ಲಸ್ ಆಗುವ ಚಾನ್ಸ್ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!