ವಿಜಯ್ ದೇವರಕೊಂಡ ಮುಂದಿನ ಸಿನಿಮಾಗೆ ಸಮಂತಾ ಹೀರೋಯಿನ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಮಂತಾ ಡಿವೋರ್ಸ್ ನ್ಯೂಸ್ ಇದೀಗ ಹಳತಾಗಿದೆ, ಪರ್ಸನಲ್ ಲೈಫ್ ಹಾಗೂ ಪ್ರೊಫೆಶನಲ್ ಲೈಫ್‌ಗೂ ಸಂಬಂಧ ಇಲ್ಲ ಎಂದಿರುವ ಸಮಂತಾ ಇದೀಗ ಹೆಚ್ಚೆಚ್ಚು ಚಿತ್ರಗಳಲ್ಲಿ ನಟಿಸ್ತಿದ್ದಾರೆ.

ಕೆಲಸ ಮಾಡ್ತಿದ್ರೆ ಬೇರೆ ಆಲೋಚನೆಗಳಿಗೆ ಸಮಯ ಇರೋದಿಲ್ಲ ಅನ್ನೋದನ್ನು ನಂಬುವ ಸಮಂತಾ ಕೈಲಿ ಸಿಕ್ಕಾಪಟ್ಟೆ ಪ್ರಾಜೆಕ್ಟ್ಸ್ ಇದೆ.
ಇದೀಗ ವಿಜಯ್ ದೇವರಕೊಂಡ ಜೊತೆಗೆ ನಟಿಸುವ ಆಫರ್ ಸಮಂತಾಗೆ ಬಂದಿದೆಯಂತೆ. ಶಿವ್ ನಿರ್ವಣ್ ನಿರ್ದೇಶನದ ಚಿತ್ರಕ್ಕೆ ವಿಜಯ್ ದೇವರಕೊಂಡ ಹೀರೋ ಅನ್ನೋ ವಿಷಯ ಪಕ್ಕಾ ಆಗಿದೆ. ಆದರೆ ಈ ಸಿನಿಮಾಗೆ ಕಿಯಾರಾ ಅಡ್ವಾನಿ ನಾಯಕಿ ಎಂದು ಹೇಳಲಾಗಿತ್ತು.

ಇದೀಗ ಈ ಆಫರ್ ಸಮಂತಾ ಕೈ ಸೇರಿದ್ದು, ಸಮಂತಾ ಒಪ್ಪಿಕೊಂಡ್ರೆ ವಿಜಯ್ ಹಾಗೂ ಸಮಂತಾರನ್ನು ಆನ್‌ಸ್ಕ್ರೀನ್ ನೋಡಬಹುದಾಗಿದೆ. ಮಹಾನಟಿ ಸಿನಿಮಾದಲ್ಲಿ ಇಬ್ಬರೂ ಪುಟ್ಟ ಪಾತ್ರ ಮಾಡಿದ್ದು, ಇಡೀ ಸಿನಿಮಾ ತುಂಬಾ ಇವರನ್ನು ನೋಡುವ ಅಭಿಮಾನಿಗಳ ಆಸೆ ಈಡೇರಲಿದ್ಯಾ? ಕಾದುನೋಡಬೇಕಿದೆ..

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!