ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿಪ್ಪರ್ ಚಾಲಕನ ನಿರ್ಲಕ್ಷ್ಯದಿಂದ ಬಾಲಕಿ ಸಮನ್ವಿ ಮೃತಪಟ್ಟಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಮ್ಮಮ್ಮ ಸೂಪರ್ ಸ್ಟಾರ್ ಖ್ಯಾತಿಯ ಸಮನ್ವಿ ನಿಧನಕ್ಕೆ ರಾಜ್ಯವೇ ಮರುಗುತ್ತಿದೆ.
ಮುಂದೆ ಸಾಗುತ್ತಿದ್ದ ಆಟೋ ಓವರ್‌ಟೇಕ್ ಮಾಡಲು ಹೊರಟ ಟಿಪ್ಪರ್ ಚಾಲಕ, ನಿಯಂತ್ರಣ ತಪ್ಪಿ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಡಿಸಿಪಿ ಕುಲ್ದೀಪ್ ಕುಮಾರ್ ಹೇಳಿದ್ದಾರೆ.
ಡಿಕ್ಕಿ ರಭಸಕ್ಕೆ ಅಮ್ಮನ ಜತೆ ಹಿಂದೆ ಕುಳಿತಿದ್ದ ಸಮನ್ವಿ ಟಿಪ್ಪರ್‌ನ ಚಕ್ರದಡಿಗೆ ಸಿಲುಕಿದ್ದಾಳೆ. ಅತಿಯಾದ ರಕ್ತಸ್ರಾವದಿಂದ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾಳೆ. ಕಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ಇದೀಗ ಸಮನ್ವಿ ಮೃತದೇಹವನ್ನು ಕುಮಾಸ್ವಾಮಿ ಲೇ ಔಟ್‌ನ ಅಪಾರ್ಟ್‌ಮೆಂಟ್‌ಗೆ ಕರೆತರಲಾಗಿದೆ. ಬಂಧುಗಳು, ಕಲಾವಿದರು ಮನೆಗೆ ಆಗಮಿಸಿದ್ದು, ಕಣ್ಣೀರಿನ ವಿದಾಯ ಹೇಳಲಾಗುತ್ತಿದೆ.