ಎರಡು ಕೆಜಿ ಅಕ್ಕಿಗೆ ಮತಾಂತರಗೊಂಡವರಿಂದ ಸನಾತನ ಧರ್ಮ ವಿನಾಶ ಅಸಾಧ್ಯ: ಹಾರಿಕಾ ಮಂಜುನಾಥ್

ಹೊಸದಿಗಂತ ವರದಿ, ಕಲಬುರಗಿ:

ಕೇವಲ ಎರಡು ಕೆಜಿ ಅಕ್ಕಿಗೆ ಮತಾಂತರಗೊಂಡವರಿಂದ ಕ್ಷಾತ್ರ ಪರಂಪರೆಯನ್ನು ಹೊಂದಿರುವಂತಹ ಸನಾತನ ಧರ್ಮದ ನಿಮೂ೯ಲನೆ ಹಾಗೂ ವಿನಾಶ ಅಸಾಧ್ಯ ಎಂದು ಖ್ಯಾತ ವಾಗ್ಮಿ ಕುಮಾರಿ ಹಾರಿಕಾ ಮಂಜುನಾಥ ಹೇಳಿದರು.

ಬುಧವಾರ ಸಂಜೆ ಕಲಬುರಗಿ ನಗರದ ಐತಿಹಾಸಿಕ ಕೋಟೆಯ ಮುಂಭಾಗದಲ್ಲಿ ಹಿಂದು ಜಾಗರಣ ವೇದಿಕೆ ಅಡಿಯಲ್ಲಿ ಪ್ರತಿಷ್ಠಾಪನೆ ಮಾಡಲಾದ ಹಿಂದು ಮಹಾಗಣಪತಿಯ ಸಮಿತಿ ಕಲಬುರಗಿ ವತಿಯಿಂದ ಆಯೋಜಿಸಿದ್ದ ಸನಾತನ ಧರ್ಮದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸನಾತನ ಧರ್ಮದ ನಿರ್ಮೂಲನೆ ಮಾಡಬೇಕೆಂದು ಮತಾಂತರಗೊಂಡ ಕೆಲವು ಅವಿವೇಕಿಗಳು ಮಾತನಾಡುತ್ತಿದ್ದಾರೆ.ಆದರೆ, ಎಲ್ಲಿಯವರೆಗೆ ಸೂರ್ಯನ ಕಿರಣಗಳು ಭೂಮಿಯನ್ನು ಸ್ಪರ್ಷಸುತ್ತದೆಯೋ ಮತ್ತು ಎಲ್ಲಿಯವರೆಗೂ ಪ್ರಕೃತಿ ಜೀವಂತವಾಗಿ ಇರಲಿದೆಯೋ,ಅಲ್ಲಿಯವರೆಗೆ ಸನಾತನ ಹಿಂದೂ ಧರ್ಮ ಶಾಶ್ವತವಾಗಿ ಉಳಿಯಲಿದೆ ಎಂದರು.

ಸನಾತನ ಧರ್ಮವು ಶಾಶ್ವತವಾಗಿ ಉಳಿಯಲಿದೆ ಎಂದು ಶ್ರೀ ಕೃಷ್ಣ ಪರಮಾತ್ಮನೆ ಹೇಳಿರುವಾಗ, ಎರಡು ಕೆಜಿ ಅಕ್ಕಿಗೆ ಮತಾಂತರಗೊಂಡಂತ ತಮಿಳುನಾಡಿನ ರಾಜಕೀಯ ಮುಖಂಡ ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದವಾಗಿದೆ.ಸನಾತನ ಧರ್ಮ,ಹಿಂದೂ ಸಂಸ್ಕೃತಿಯನ್ನು ಯಾರಿಂದಲೂ ನಿಮೂ೯ಲನೆ ಮಾಡಲು ಸಾಧ್ಯವಿಲ್ಲ ಎಂದರು.

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಘೋಷ ವಾದ್ಯಗಳೊಂದಿಗೆ ಗಣೇಶ್ ವಂದನ ಕಾಯ೯ಕ್ರಮ ನಡೆಯಿತು. ಈ ಸಂದರ್ಭದಲ್ಲಿ ರಾಘವೇಂದ್ರ ಚೌದರಿ, ಮಂಜುನಾಥ ಪವಾರ್,ರುದ್ರಪ್ಪಾ ಗಾಂಜಿ, ಶ್ರೀಮತಿ ಸುಧಾ ಹಾಲಕಾಯಿ,ಖ್ಯಾತ ಉದ್ಯಮಿ ಸಂಜು ಗುಪ್ತಾ, ಜಿಲ್ಲಾಧ್ಯಕ್ಷ ನಾಗೇಂದ್ರ ಕಾಬಡೆ, ಸಮಿತಿ ಪ್ರಧಾನ ಕಾರ್ಯದರ್ಶಿ ಸುರೇಶ್ ಟೆಂಗಳಿ, ಸದಸ್ಯ ರವಿ ಮುತ್ತಿನ, ಮಹೇಶ್ ರಂಗದಾಳ್ ಸೇರಿದಂತೆ ಸಮಿತಿಯ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!