Sunday, December 3, 2023

Latest Posts

ಸನಾತನ ಧರ್ಮ ನಾಶ ಮಾಡುವುದು ಅಸಾಧ್ಯ: ನಿರ್ಭಯಾನಂದ ಸರಸ್ವತಿ ಸ್ವಾಮೀಜಿ

ಹೊಸದಿಗಂತ ವರದಿ ಹಾಸನ:

ಸನಾತನ ಧರ್ಮ ನಾಶ ಮಾಡುತ್ತೇವೆಂದು ಹೇಳುವವರು ಹಿಂದೆಯೂ ಇದ್ದರು. ಮುಂದೆಯೂ ಇರುತ್ತಾರೆ. ಹೇಳುವವರಿಂದ ನಾಶಪಡಿಸಲು ಸಾಧ್ಯವಿಲ್ಲ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮ ಗದಗ ಹಾಗೂ ವಿಜಯಪುರದ ಅಧ್ಯಕ್ಷರಾದ ಸ್ವಾಮಿ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ನೀಡುತ್ತಿದ್ದರು.

ನಗರದ ಶೃಂಗೇರಿ ಶ್ರೀ ಶಂಕರ ಮಠದಲ್ಲಿ ರಾಷ್ಟ್ರೋದಯ ಸೇವಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಸನಾತನ ಧರ್ಮ ಕುರಿತು ಚಿಂತನ ಮಂಥನ ಸಂವಾದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ‌ಸನಾತನ ಧರ್ಮ ಎಂಬ ಶಬ್ದದ ಪ್ರಯೋಗ ಈ‌ ಕಾಲದಲ್ಲಿ ಹೆಚ್ಚಾಗಿ ಕೇಳಿಬರುತ್ತಿದೆ. ಸನಾತನ ಎಂದರೆ ಸದಾತನವಾಗಿರುವಂಥದ್ದು, ಯಾವಾಗಲೂ ಇರುವಂಥದ್ದು. ಧರ್ಮಕ್ಕೆ ಕೋಮು ಎಂಬ ಅರ್ಥ ಕಲ್ಪಿಸುತ್ತಿದ್ದಾರೆ. ಕೆಳಗೆ ಬೀಳುವನನ್ನು ಎತ್ತಿ ಹಿಡಿಯುವುದೇ ಧರ್ಮ‌ ಅದು ಬೌದ್ಧಿಕ, ಸಾಮಾಜಿಕ, ಆರ್ಥಿಕ, ನೈತಿಕವಾಗಿರಲಿ. ಅದು ಸನಾತನ ಧರ್ಮ. ಈ ಧರ್ಮವನ್ನು ನಾಶಪಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಕ್ಲಿಷ್ಟಕರವಾದ ಅಧ್ಯಾತ್ಮ ವಿದ್ಯೆ ಮತ್ತು ಆತ್ಮದ ವಿಚಾರಗಳನ್ನು ಬಹಳ ಸರಳವಾಗಿ ಕಾರ್ಯಕ್ರಮದುದ್ದಕ್ಕೂ ವಿವರಿಸುತ್ತಾ ಹೋದ ಶ್ರೀಗಳು, ಪ್ರತಿಯೊಬ್ಬರ ಅಸ್ತಿತ್ವ ಅವರ ತಂದೆ ತಾಯಿಯಿಂದಲೂ ಅಥವಾ ತಂದೆ ತಾಯಿಯ ಮೂಲಕವೂ ಎಂಬ ಜಿಜ್ಞಾಸೆಯನ್ನು ಸಭೆಯ ಮುಂದಿಟ್ಟು ಅದಕ್ಕೆ ಉತ್ತರ ಹುಡುಕಿದರು. ಇನ್ನು ಸನಾತನ ಧರ್ಮದ ವಿರುದ್ಧ ಮಾತನಾಡಿದ ತಮಿಳುನಾಡಿನ ಉದಯ ನಿಧಿ ಸ್ಟಾಲಿನ್ ಗೆ ತಮ್ಮ ಮಾತಿನ ಮೂಲಕವೇ ಅಲ್ಲಲ್ಲಿ ಚಡಿಯೇಟು ನೀಡಿದ ಅವರು, ಸನಾತನ ಧರ್ಮದ ವಿರುದ್ಧ ಮಾತನಾಡುವವರಿಗೆ ದೇವರು ಸದ್ಬುದ್ದಿ ನೀಡಲಿ, ಇಂತಹ ಅವಿವೇಕಿ ಮಾತುಗಳು ಅವರ ಬಾಯಿಂದ ಮತ್ತೆ ಬಾರದಿರಲಿ ಎಂದು ಆಶಿಸುತ್ತೇನೆ ಎಂದು ನುಡಿದರು.

ತಮ್ಮ ಪ್ರವಚನದ ಉದ್ದಕ್ಕೂ ಆದಿಶಂಕರಾಚಾರ್ಯರನ್ನು ಮತ್ತು ಸ್ವಾಮಿ ವಿವೇಕಾನಂದರನ್ನು ಸ್ಮರಿಸುತ್ತಾ, ಆಧ್ಯಾತ್ಮ ಲೋಕಕ್ಕೆ ಶಂಕರರ ಕೊಡುಗೆಯನ್ನು ತಿಳಿಸುತ್ತಾ ಹೋದ ಶ್ರೀಗಳು ಉಪನಿಷತ್ಗಳನ್ನು ಕಾಡಿನಿಂದ ನಾಡಿಗೆ ತಂದವರು ಶಂಕರರು. ಅದನ್ನು ಮನೆ ಮನೆಗೆ ತಲುಪಿಸಿದವರು ವಿವೇಕಾನಂದರು. ಭ್ರಮೆಯಿಂದ ಪಾರಾಗಲು ಪೂಜೆ ಪುನಸ್ಕಾರಗಳು ಸಹಾಯಕ ಆದರೆ ಬ್ರಹ್ಮಾನನ್ನು ಅರಿಯಲು ಉಪನಿಷತ್ ಮಾತ್ರವೇ ದಾರಿ ಎಂಬ ಸಂದೇಶ ನೀಡಿದರು. ನಾವು ಸಿಂಹಗಳು, ಆದರೆ ಕುರಿಯ ಹಿಂಡಿನಲ್ಲಿ ಸೇರಿ ಕುರಿಗಳಂತೆ ವರ್ತಿಸುತ್ತಾ ನಮ್ಮ ಸಾಮರ್ಥ್ಯವನ್ನು ಮರೆತಿದ್ದೇವೆ ಎಂದು ಬೇಸರವ್ಯಕ್ತಪಡಿಸಿದರು.

ಕಾರ್ಯಕ್ರಮಕ್ಕೂ ಮೊದಲು ವೇದಬ್ರಹ್ಮ ಕೃಷ್ಣಮೂರ್ತಿ ಘನಪಾಠಿ ಇವರಿಂದ ವೇದಘೋಷ ನಡೆಸಿಕೊಟ್ಟರು. ಸುಪ್ರತೀಕ್ ಹಾಗು ವಿಶ್ವಾಸ್ ಭಾರದ್ವಜ್ ಅವರಿಂದ ಪ್ರಾರ್ಥನೆ ನೆರವೇರಿತು. ವೇದಿಕೆಯಲ್ಲಿ ವಾಣಿಜ್ಯೋದ್ಯಮಿ ಅನಿಲ್ ಕುಮಾರ್ ಹಾಗೂ ರಾಮಕೃಷ್ಣ ಆಶ್ರಮದ ಯಲಹಂಕ ಶಾಖೆಯ ಅಭಯಾನಂದ ಸ್ವಾಮೀಜಿ, ಟ್ರಸ್ಟ್ ನಿರ್ದೇಶಕ ಅನೀಲ್, ವೇಧ ಭಾರತೀಯ ಸಂಯೋಜಕ ಹರಿಹರಪುರ ಶ್ರೀಧರ್, ಆರ್.ಎಸ್.ಎಸ್. ಮುಖಂಡ ಮೋಹನ್ ಇತರರು ಉಪಸ್ಥಿತರಿದ್ದರು. ಬಿಜೆಪಿ ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್ ನಿರೂಪಿಸಿದರು.

ತುಂಬಿದ್ದ ಸಭಾಂಗಣದಲ್ಲಿ ನಿರ್ಭಯಾನಂದರ ಮಾತು ಎಲ್ಲರನ್ನೂ ಮಂತ್ರಮುಗ್ಧಗೊಳಿಸಿತ್ತು. ತಮ್ಮ ಎರಡು ಗಂಟೆಗಳ ದೀರ್ಘಾವಧಿಯ ಭಾಷಣದಲ್ಲಿ “ಉಪನಿಷತ್ ಕಾಲಕ್ಕೆ ಹಿಂತಿರುಗಿ ಮತ್ತು ಸತ್ಯಾನ್ವೇಷಣೆಯೇ ನಿಮ್ಮ ಗುರಿಯಾಗಲಿ” ಎಂಬ ಸಂದೇಶದೊಂದಿಗೆ ಉಪನ್ಯಾಸ ಸಮಾಪ್ತಿಗೊಳಿಸಿದರು. ‌ಉಪನ್ಯಾಸದ ನಂತರ ಅನೇಕ ಬಹಳ ಬಹಳಷ್ಟು ಹೊತ್ತು ಸಂವಾದ ಕಾರ್ಯಕ್ರಮ ನಡೆದು ನೆರೆದಿದ್ದವರ ಪ್ರಶ್ನೆಗಳಿಗೆ ಶ್ರೀಗಳು ಸೂಕ್ತವಾಗಿ ಉತ್ತರಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!