ಸನಾತನ ಧರ್ಮ ಉನ್ನತ ಕರ್ತವ್ಯಗಳ ಗುಚ್ಛ, ಇಲ್ಲಿ ನಾಶದ ಮಾತೇಕೆ?: ಮದ್ರಾಸ್​ ಹೈಕೋರ್ಟ್​

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸನಾತನ ಧರ್ಮವು ಉನ್ನತ ಕರ್ತವ್ಯಗಳ ಗುಚ್ಛ. ಆದರೆ, ಜಾತೀಯತೆ ಮತ್ತು ಅಸ್ಪೃಶ್ಯತೆಯ ಅಂಶಗಳನ್ನೇ ವೈಭವೀಕರಿಸಲಾಗುತ್ತಿದೆ. ಆ ಧರ್ಮವನ್ನೇ ನಾಶ ಮಾಡಬೇಕು ಎಂಬುದು ಸರಿಯಲ್ಲ ಎಂದು ಮದ್ರಾಸ್​ ಹೈಕೋರ್ಟ್​ ಹೇಳಿದೆ.

ತಮಿಳುನಾಡು ಮಾಜಿ ಸಿಎಂ ಅಣ್ಣಾದೊರೈ ಅವರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಸನಾತನ ಧರ್ಮದ ವಿರುದ್ಧದ ಅಂಶಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವಂತೆ ಕಾಲೇಜೊಂದರ ವಿದ್ಯಾರ್ಥಿನಿಯರಿಗೆ ಪ್ರಾಂಶುಪಾಲರು ಸೂಚಿಸಿದ್ದರು. ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆಯ ವೇಳೆ ನ್ಯಾಯಮೂರ್ತಿ ಎನ್ ಶೇಷಸಾಯಿ ಅವರಿದ್ದ ಪೀಠ ಈ ಹೇಳಿಕೆ ನೀಡಿದೆ.

ಸನಾತನ ಧರ್ಮವು ಹಿಂದು ಜೀವನ ವಿಧಾನವನ್ನು ಅನುಸರಿಸುವವರಿಗೆ ರಾಷ್ಟ್ರ, ಪೋಷಕರು ಮತ್ತು ಗುರುಗಳ ಬಗ್ಗೆ ಕರ್ತವ್ಯಗಳನ್ನು ಒಳಗೊಂಡಂತೆ ವಿಧಿಸಲಾದ ಶಾಶ್ವತ ಕರ್ತವ್ಯಗಳ ಗುಚ್ಛ. ರಾಷ್ಟ್ರ, ಪೋಷಕರು ಹಾಗೂ ಗುರುಗಳ ಬಗ್ಗೆ ಎಂದಿಗೂ ಗೌರವ ಸನಾತನ ಧರ್ಮದಲ್ಲಿ ಕಡಿಮೆಯಾಗೋದಿಲ್ಲ. ಇಂಥ ಕರ್ತವ್ಯಗಳನ್ನು ನಾಶ ಪಡಿಸಬೇಕು ಎನ್ನುವ ಮಾತುಗಳು ಬರುತ್ತಿರುವುದೇಕೆ ಎಂದು ಪ್ರಶ್ನೆ ಮಾಡಿದೆ. ಸನಾತನ ಧರ್ಮವು ಕೇವಲ ಜಾತೀಯತೆ ಮತ್ತು ಅಸ್ಪೃಶ್ಯತೆಯನ್ನು ಉತ್ತೇಜಿಸುತ್ತದೆ ಎಂಬ ಕಲ್ಪನೆ ಜನರಲ್ಲಿದೆ. ಆದರೆ, ಈ ಕಲ್ಪನೆಯನ್ನು ಅವರು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ.ಸನಾತನ ಧರ್ಮವು ಒಂದು ಜೀವನ ವಿಧಾನವಾಗಲು ಉದ್ದೇಶಿಸಿದ್ದರೂ ಎಲ್ಲೋ ಒಂದು ಮಾರ್ಗದಲ್ಲಿ ಜಾತೀಯತೆ ಮತ್ತು ಅಸ್ಪೃಶ್ಯತೆಯನ್ನು ಉತ್ತೇಜಿಸುತ್ತದೆ ಎಂಬ ಕಲ್ಪನೆಯನ್ನು ಹರಿಡಿಸಲಾಗಿತು. ಸನಾತನ ಧರ್ಮದ ತತ್ವಗಳಲ್ಲಿ ಅಸ್ಪೃಶ್ಯತೆ ಅನುಮತಿಸಿದರೂ ಸಹಿಸಲಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಸಮಾನ ನಾಗರಿಕರ ದೇಶದಲ್ಲಿ ಅಸ್ಪೃಶ್ಯತೆ ಸಹಿಸಲಾಗುವುದಿಲ್ಲ . ಸನಾತನ ಧರ್ಮದ ತತ್ವ ಅಸ್ಪಶೃತೆ ಇದೆ ಎಂದು ಹೇಳಲಾದರೂ, ಸಂವಿಧಾನದ 17 ನೇ ವಿಧಿ ಅಸ್ಪೃಶ್ಯತೆಯನ್ನು ತೊಡೆದುಹಾಕಲಾಗಿದೆ ಎಂದು ಘೋಷಿಸಿರುವುದರಿಂದ ಅಸ್ಪಶೃತೆ ದೇಶದಲ್ಲಿ ಇರಲು ಸಾಧ್ಯವಿಲ್ಲ ಎಂದು ಹೇಳಿದರು.

ಇದೇ ವಾಕ್ ಸ್ವಾತಂತ್ರ್ಯವು ಮೂಲಭೂತ ಹಕ್ಕಾಗಿದ್ದರೂ, ಅದು ದ್ವೇಷದ ಭಾಷಣವಾಗಿ ಬದಲಾಗಬಾರದು. ವಿಶೇಷವಾಗಿ ಅದು ಧರ್ಮದ ವಿಷಯಗಳಿಗೆ ಸಂಬಂಧಿಸಿದಂತೆ. ಇಂತಹ ಭಾಷಣದಿಂದ ಯಾರಿಗೂ ನೋವಾಗದಂತೆ ನೋಡಿಕೊಳ್ಳುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಪ್ರತಿಯೊಂದು ಧರ್ಮವು ನಂಬಿಕೆಯ ಮೇಲೆ ಸ್ಥಾಪಿತವಾಗಿದೆ. ಆದ್ದರಿಂದ, ಧರ್ಮಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ವಾಕ್ ಸ್ವಾತಂತ್ರ್ಯವನ್ನು ಚಲಾಯಿಸಿದಾಗ, ಯಾರಿಗೂ ನೋವಾಗದಂತೆ ನೋಡಿಕೊಳ್ಳುವುದು ಅವಶ್ಯಕವಾಗಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಮುಕ್ತ ಭಾಷಣವು ಎಂದೂ ದ್ವೇಷ ಭಾಷಣವಾಗಬಾರದ’ ಎಂದು ಎಚ್ಚರಿಸಿದೆ.

ಇತ್ತೀಚೆಗೆ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ (udhayanidhi stalin) ಅವರು ಸನಾತನ ಧರ್ಮದ ವಿರುದ್ಧ ಮಾಡಿದ ಹೇಳಿಕೆಗಳ ಹಿನ್ನೆಲೆಯಲ್ಲಿ ನ್ಯಾಯಾಲಯದ ಟೀಕೆಗಳು ಬಂದಿವೆ. ಸನಾತನ ಧರ್ಮದ ವಿಚಾರವಾಗಿ ಅವರು ಮಾಡಿದ ಟೀಕೆಗೆ ದೇಶಾದ್ಯಂತ ವಿರೋಧಗಳು ವ್ಯಕ್ತವಾಗಿದ್ದವು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!