ಹೊಸದಿಗಂತ ವರದಿ ಉತ್ತರಕನ್ನಡ:
ಮುಂಡಗೋಡ ತಾಲೂಕಿನ ಸನವಳ್ಳಿ ಜಲಾಶಯ ಭರ್ತಿಯಾಗಿ ಕೋಡಿ ಬಿದ್ದು ಹರಿಯುತ್ತಿದೆ. ಸತತವಾಗಿ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯಿಂದ ತಾಲೂಕಿನಲ್ಲಿನ ಮಳಗಿಯ ಧರ್ಮಾ ಜಲಾಶಯ, ಬಾಚಣಕಿ ಜಲಾಶಯ ಹಾಗೂ ಅತ್ತಿವೇರಿ ಜಲಾಶಯಗಳು ಭರ್ತಿಯಾದಯಾಗಿದ್ದವು ರವಿವಾರ ಸನವಳ್ಳಿ ಜಲಾಶಯ ಭರ್ತಿಯಾಗಿದೆ. ತಾಲೂಕಿನ ನಾಲ್ಕನೇ ಭರ್ತಿಯಾದ ಜಲಾಶಯ ಇದಾಗಿದೆ.
ಸನವಳ್ಳಿ ಜಲಾಶಯದಿಂದ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಜಾಲಾಶಯವಾಗಿದೆ. ಹಾಗೂ ಸನವಳ್ಳಿಭಾಗದ ನೂರಾರು ಎಕರೆ ಜಮೀನುಗಳಿಗೆ ವ್ಯವಸಾಯಕ್ಕೆ ಇದೆ ಜಲಾಶಯದಿಂದ ನೀರು ಹರಿಯುತ್ತದೆ. ಜಲಾಶಯ ತುಂಬಿ ಕೋಡಿ ಹರಿಯುತ್ತಿರುವುದರಿಂದ ಪಟ್ಟಣದ ಜನತೆ ಹಾಗೂ ಸನವಳ್ಳಿ ಗ್ರಾಮದ ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಹಾಗೂ ಕೋಡಿ ಬಿದ್ದ ಸ್ಥಳಗಳಿಗೆ ಸಾರ್ವಜನಿಕರು ತೆರಳಿ ವೀಕ್ಷಿಸುತ್ತಿರುವುದು ಕಂಡು ಬಂದಿತ್ತು.