ಸೀಮಂತ ಸಂಭ್ರಮದಲ್ಲಿ ಸ್ಯಾಂಡಲ್​ವುಡ್ ನಟಿ ಹರಿಪ್ರಿಯಾ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಸ್ಯಾಂಡಲ್​ವುಡ್​ ನಟ ವಸಿಷ್ಠ ಸಿಂಹ ಹಾಗೂ ಖ್ಯಾತ ನಟಿ ಹರಿಪ್ರಿಯಾ ಮನೆಗೆ ಹೊಸ ಅತಿಥಿಯ ಆಗಮನದ ನಿರೀಕ್ಷೆಯಲ್ಲಿದ್ದಾರೆ.

ಸಿಂಹಪ್ರಿಯಾ ಎಂದೇ ಖ್ಯಾತಿ ಪಡೆದಿರುವ ಸ್ಯಾಂಡಲ್‌ವುಡ್‌ನ ಕ್ಯೂಟ್ ಕಪಲ್ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ದೀಪಾವಳಿ ಹಬ್ಬದ ದಿನವೇ ಅಭಿಮಾನಿಗಳ ಗುಡ್​ನ್ಯೂಸ್​ವೊಂದನ್ನು ಕೊಟ್ಟಿದ್ದರು. ಇದೀಗ ಈ ಸ್ಟಾರ್​ ದಂಪತಿ ಮನೆಯಲ್ಲಿ ಮತ್ತೊಂದು ಶುಭ ಕಾರ್ಯ ನಡೆದಿದೆ.

ಇದೀಗ ನಟಿ ಹರಿಪ್ರಿಯಾ ಸೀಮಂತ ಕಾರ್ಯಕ್ರಮ ನಡೆದಿದೆ. ಸ್ಯಾಂಡಲ್​ವುಡ್​ ಸ್ಟಾರ್​ಗಳು, ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಸೀಮಂತ ಸಮಾರಂಭ ನಡೆದಿದೆ.

ಇನ್ನೂ, ನಟಿ ಹರಿಪ್ರಿಯ ಸೀಮಂತ ಕಾರ್ಯಕ್ರಮವು ಮಾಗಡಿ ರಸ್ತೆಯ ಖಾಸಗಿ ಸ್ಥಳದಲ್ಲಿ ನಡೆದಿದೆ. ನಟಿಗೆ ಶುಭ ಹಾರೈಸಲು ಸ್ಯಾಂಡಲ್​ವುಡ್​ ಹಿರಿಯ ನಟಿ ತಾರಾ ಅವರು ಗಿಫ್ಟ್ ಸಮೇತ ಬಂದು ವಿಶ್​ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!