ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾಗೆ ಮೂಗು ಚುಚ್ಚಿಸಿದ್ದೇ ಈ ನಟವಂತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಕಳೆದ ಕೆಲವು ದಿನಗಳ ಹಿಂದೆ ನಟಿ ಹರಿಪ್ರಿಯಾ ಮೂಗು ಚುಚ್ಚಿಸಿಕೊಂಡು ಆ ಎಕ್ಸಿಪೀರಿಯನ್ಸ್ ಕೂಡ ಹಂಚಿಕೊಳ್ಳುವ ಮೂಲಕ ಸುದ್ದಿಯಾಗಿದ್ದರು.

ಸಡನ್ನಾಗಿ ಹರಿಪ್ರಿಯಾ ಮೂಗು ಚುಚ್ಚಿಕೊಳ್ಳಲು ಕಾರಣವೇನು ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲೂ ಕಾದಿತ್ತು. ಆದರೆ ಇದೀಗ ಎಲ್ಲದಕ್ಕೂ ಉತ್ತರ ಸಿಕ್ಕಿದೆ.

ಅದೇನೆಂದರೆ ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಅಂತೆ. ಅದ್ರಲ್ಲೂ ವಿಶೇಷ ಏನೆಂದರೆ ಆ ಮೂಗುತ್ತಿ ಚುಚ್ಚಿಸಿದ್ದು, ಹೊಸ ಜೀವನಕ್ಕೆ ಕಾಲಿಡುತ್ತಿರುವ ಹುಡುಗನೇ.
ಹಾಗಾದ್ರೆ ಆ ಹುಡುಗ ಯಾರು ಅಂತೀರಾ, ಮತ್ತೆ ಯಾರು ಅಲ್ಲ ನಟ ವಸಿಷ್ಠ ಸಿಂಹ.

ಹರಿಪ್ರಿಯಾ ಮೂಗು ಚುಚ್ಚಿಸಿಕೊಂಡ ವಿಡಿಯೋದಲ್ಲಿ ವಸಿಷ್ಠ ಸಿಂಹ ಕೂಡ ಇದ್ದು, ಅವರೇ ಮುಂದೆ ನಿಂತು ತನ್ನ ಹುಡುಗಿಗೆ ಮೂಗು ಚುಚ್ಚಿಸಿದ್ದಾರೆ. ಇನ್ನು ವಿಡಿಯೋ ಹಂಚಿಕೊಂಡ ಸಂದರ್ಭದಲ್ಲಿ ಆ ಹುಡುಗ ಯಾರು ಎಂದು ಗೊತ್ತಾಗಿರಲಿಲ್ಲ. ಇಬ್ಬರ ಮದುವೆ ವಿಚಾರ ಹೊರಬೀಳುತ್ತಿದ್ದಂತೆಯೇ ವಿಡಿಯೋದಲ್ಲಿ ವಸಿಷ್ಠ ಇರುವುದನ್ನು ಪತ್ತೆ ಮಾಡಲಾಗಿದೆ.

ಹರಿಪ್ರಿಯಾ ಸ್ಯಾಂಡಲ್ ವುಡ್‌ನ ಖ್ಯಾತ ನಟ ವಸಿಷ್ಠ ಸಿಂಹ ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ವಸಿಷ್ಠ ಮತ್ತು ಹರಿಪ್ರಿಯಾ ಅವರದ್ದು ಲವ್ ಮ್ಯಾರೇಜ್. ಇಬ್ಬರೂ ತುಂಬಾ ಆಪ್ತರಾಗಿದ್ದಾರೆ. ಆಗಾಗ್ಗೆ ಡಾನ್ಸ್ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದರು. ಆದರೆ ಎಲ್ಲಿಯೂ ಪ್ರೀತಿಯ ವಿಚಾರ ಬಿಟ್ಟುಕೊಟ್ಟಿರಲಿಲ್ಲ. ಮೊನ್ನೆಯಷ್ಟೇ ದುಬೈನಲ್ಲಿ ಶಾಪಿಂಗ್‌ ಮಾಡಿದ್ದಾರೆ. ಆದರೀಗ ಇದೀಗ ಇಬ್ಬರ ಪ್ರೀತಿ ವಿಚಾರ ಬಹಿರಂಗವಾಗಿದೆ.

ಈ ಜೋಡಿ ಇನ್ನೊಂದು ತಿಂಗಳಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳಲು ಎಲ್ಲಾ ತಯಾರಿ ಕೂಡ ಮಾಡಿದ್ದಾರಂತೆ. ಅಲ್ಲದೇ ನಿಶ್ಚಿತಾರ್ಥದ ಬಳಿಕ ಅಂದರೆ ಎರಡು ತಿಂಗಳಲ್ಲಿ ಇಬ್ಬರೂ ಹಸೆಮಣೆ ಏರಲಿದ್ದಾರೆ ಎನ್ನುವ ಮಾತು ಕೂಡ ಗಾಂಧಿ ನಗರದಲ್ಲಿ ಕೇಳಿಬಂದಿದೆ. ಆಆದ್ರೆ ಈ ಜೋಡಿಯಿಂದ ಇನ್ನು ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!