ಹೊಸದಿಗಂತ ಡಿಜಿಟಲ್ ಡೆಸ್ಕ್:
ರಿಯಲ್ ಸ್ಟಾರ್ ಉಪೇಂದ್ರ ನಟನೆಯಲ್ಲಿ ಮೂಡಿಬರುತ್ತಿರುವ ಕಬ್ಜ ಚಿತ್ರ ಈಗಾಗಲೇ ಎಲ್ಲರ ಗಮನ ಸೆಳೆದಿದೆ.
ಕಳೆದ ಒಂದು ವರ್ಷದಿಂದ ಶೂಟಿಂಗ್ ನಡೆಯುತಲಿದ್ದು, ಚಿತ್ರ ಯಾವಾಗ ತೆರೆ ಕಾಣಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.
ಕಬ್ಜ ಚಿತ್ರತಂಡ ಪ್ರತಿ ಹಬ್ಬಕ್ಕೂ ಒಂದು ವಿಶೇಷ ಪೋಸ್ಟರ್ ಮಾಡಿ ಜನತೆಗೆ ಶುಭ ಕೋರುತ್ತದೆ. ಆದರೆ ಈಗ ಇದೇ ವಿಚಾರದಿಂದ ಚಿತ್ರತಂಡ ನೆಟ್ಟಿಗರಿಂದ ಟ್ರೋಲ್ ಆಗುತ್ತಿದ್ದಾರೆ.
ಶಿವರಾತ್ರಿಗೆ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿದ ಚಿತ್ರತಂಡ ಮುಂದೆ ಗಿನ್ನಿಸ್ ದಾಖಲೆ ಮಾಡಲಿದೆ ಎಂದು ಸಿಕ್ಕಾಪಟ್ಟೆ ಟ್ರಾಲ್ ಮಾಡುತ್ತಿದ್ದಾರೆ. ಕಬ್ಜ ತಂಡ ಪ್ರತಿ ಹಬ್ಬಕ್ಕೂ ಪೋಸ್ಟರ್ ಮಾಡಿ ಹಾಕುವುದುನ್ನು ಅಭಿಮಾನಿಗಳು ಗಮನಿಸಿ ಚಿತ್ರತಂಡದ ಕಾಲೆಳೆದಿದ್ದಾರೆ.
ಚಿತ್ರತಂಡ ಕೃಷ್ಣ ಜನ್ಮಾಷ್ಟಮಿ, ಗೌರಿ ಗಣೇಶ, ಗಾಂಧಿ ಜಯಂತಿ, ನವರಾತ್ತಿ, ರಮ್ಜಾನ್, ಕ್ರಸ್ಮಸ್, ಗಣರಾಜ್ಯೋತ್ಸವ ಸೇರಿ ಎಲ್ಲಾ ವಿಶೇಷ ದಿನಗಳಿಗೂ ಪೋಸ್ಟರ್ ಮಾಡುತ್ತಿದೆ.