ಹೊಸದಿಗಂತ ವರದಿ ಬಳ್ಳಾರಿ:
ಸಂಡೂರು ಎಸ್ಟಿ ಮೀಸಲು ಕ್ಷೇತ್ರದ ಉಪ ಚುನಾವಣೆ ಬುಧವಾರ ನಡೆಯುತ್ತಿದ್ದು, ಬೆಳಿಗ್ಗೆಯಿಂದಲೇ ಮತದಾರರು ಸರದಿಯಲ್ಲಿ ನಿಂತು ಉತ್ಸಾಹದಿಂದ ಮತದಾನ ಮಾಡಲು ಮುಂದಾಗಿದ್ದು, ಬೆ.11ಕ್ಕೆ ಶೇ.26 ರಷ್ಟು ಮತದಾನವಾಗಿದೆ.
ಯುವಕರು, ವೃದ್ಧರು, ಮಹಿಳೆಯರು, ವ್ಯಾಪ್ತಿಯ ಮತಗಟ್ಟೆ ಕೇಂದ್ರಕ್ಕೆ ತೆರಳಿ ಸರದಿಯಲ್ಲಿ ನಿಂತು ಮತದಾನ ಮಾರುತ್ತಿರುವುದು ಕಂಡು ಬಂತು. , ಬೆಳಿಗ್ಗೆಯಿಂದಲೇ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಎರಡು ಪಕ್ಷಗಳ ಮದ್ಯೆ ತೀವ್ರ ನೇರ ಹಣಾಹಣಿ ಏರ್ಪಟ್ಟಿದೆ.