ಬೆಳಗಿನ ಉಪಾಹಾರಕ್ಕೆ ಅಥವಾ ಸಂಜೆ ತಿಂಡಿಗೆ ಬೇಗನೆ ತಯಾರಿಸಬಹುದಾದ ರುಚಿಕರವಾದ ಖಾದ್ಯ ಬೇಕೇ? ಹಾಗಿದ್ದರೆ ಪೆರಿ ಪೆರಿ ಎಗ್ ಸ್ಯಾಂಡ್‌ವಿಚ್ ಟ್ರೈ ಮಾಡಿ. ಮೊಟ್ಟೆಯ ಪ್ರೋಟೀನ್ ಮತ್ತು ಪೆರಿ ಪೆರಿ ಮಸಾಲೆಯ ಖಾರ ರುಚಿ ಈ ಸ್ಯಾಂಡ್‌ವಿಚ್‌ಗೆ ವಿಶೇಷ ರುಚಿ ನೀಡುತ್ತದೆ.
ಬೇಕಾಗುವ ಸಾಮಗ್ರಿಗಳು:
ಬೇಯಿಸಿದ ಮೊಟ್ಟೆ – 2
ಮೇಯೋನಿಸ್ ಅಥವಾ ಫ್ರೆಶ್ ಕ್ರೀಮ್ – 2 ಚಮಚ
ಪೆರಿ ಪೆರಿ ಮಸಾಲೆ ಅಥವಾ ಸಾಸ್ – 1 ರಿಂದ 2 ಚಮಚ
ಸಣ್ಣದಾಗಿ ಹೆಚ್ಚಿದ ಈರುಳ್ಳಿ – 2 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಕರಿಮೆಣಸಿನ ಪುಡಿ – ಸ್ವಲ್ಪ
ಬ್ರೆಡ್ ತುಂಡುಗಳು – 4
ಬೆಣ್ಣೆ ಅಥವಾ ತುಪ್ಪ – ಅಗತ್ಯಕ್ಕೆ ತಕ್ಕಷ್ಟು
ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ಕತ್ತರಿಸಿದ ಮೊಟ್ಟೆ,ಮೇಯೋನಿಸ್, ಪೆರಿ ಪೆರಿ ಮಸಾಲೆ, ಈರುಳ್ಳಿ, ಉಪ್ಪು ಮತ್ತು ಕರಿಮೆಣಸಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಕಲಸಿ.
ಒಂದು ಬ್ರೆಡ್ ತುಂಡಿನ ಮೇಲೆ ತಯಾರಿಸಿದ ಮಿಶ್ರಣವನ್ನು ಸಮವಾಗಿ ಹಚ್ಚಿ. ಅದರ ಮೇಲೆ ಮತ್ತೊಂದು ಬ್ರೆಡ್ ತುಂಡನ್ನು ಇಟ್ಟು ಮುಚ್ಚಿ.
ಬ್ರೆಡ್‌ನ ಹೊರಭಾಗಕ್ಕೆ ಬೆಣ್ಣೆ ಅಥವಾ ತುಪ್ಪ ಹಚ್ಚಿ, ಬಿಸಿ ತವಾದ ಮೇಲೆ ಎರಡೂ ಬದಿಗಳನ್ನು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಫ್ರೈ ಮಾಡಿ.
ಬಿಸಿ ಬಿಸಿ ಪೆರಿ ಪೆರಿ ಎಗ್ ಸ್ಯಾಂಡ್‌ವಿಚ್ ಅನ್ನು ಟೊಮೆಟೊ ಸಾಸ್, ಹಸಿರು ಚಟ್ನಿ ಅಥವಾ ಒಂದು ಕಪ್ ಬಿಸಿ ಚಹಾದೊಂದಿಗೆ ಸವಿಯಬಹುದು.



