spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, May 22, 2022

Latest Posts

ಕರ್ನಾಟಕದ ಬಡ ವರ್ಗದ ಜನರಿಗೆ ಕೇಂದ್ರದಿಂದ ಸಂಕ್ರಾಂತಿ ಕೊಡುಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಕೇಂದ್ರ ಸರಕಾರ ಕರ್ನಾಟಕದ ಬಡ ವರ್ಗದವರಿಗೆ ಮಕರ ಸಂಕ್ರಾಂತಿ ಕೊಡುಗೆಯನ್ನು ನೀಡಿದೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟ್ವೀಟ್ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡದಲ್ಲಿಯೇ ರಿಪ್ಲೈ ಟ್ವೀಟ್ ಮಾಡಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ಅವರು ಟ್ವೀಟ್ ಮಾಡಿ, ‘ಪಿಎಂಎವೈ-ಜಿ ಅಡಿಯಲ್ಲಿ ಕರ್ನಾಟಕದ ಗ್ರಾಮೀಣ ಬಡ ವರ್ಗದ 18,78,671 ವಸತಿ ರಹಿತ ಹಾಗೂ 6,61,535 ನಿವೇಶನ ರಹಿತರ ಸಿಂಕ್ರೊನೈಸೇಶನ್‌ನ ಬಹುದಿನಗಳ ಬೇಡಿಕೆಯನ್ನು ಅನುಮೋದಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ಇದು ನಿಜವಾಗಿಯೂ ಆ ಎಲ್ಲ ಜನರ ಜೀವನದಲ್ಲಿ ಹೊಸ ಸಂತೋಷವನ್ನು ತರುವ ಜೊತೆಗೆ ಮಕರ ಸಂಕ್ರಾಂತಿಯನ್ನು ಇನ್ನಷ್ಟು ವಿಶೇಷವಾಗಿಸಿದೆ’ ಎಂದು ಹೇಳಿದ್ದಾರೆ.

ಇದಕ್ಕೆ ರಿಪ್ಲೈ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ‘ರಾಷ್ಟ್ರದ ಪ್ರಗತಿಗೆ ಅಭೂತಪೂರ್ವ ಕೊಡುಗೆ ನೀರುತ್ತಿರುವ ಕರ್ನಾಟಕದ ನನ್ನ ಸಹೋದರರು ಮತ್ತು ಸಹೋದರಿಯರಿಗೆ ಮಕರ ಸಂಕ್ರಾಂತಿಯ ಶುಭಾಶಯಗಳು. ರಾಜ್ಯದ ಜನರ ಸಬಲೀಕರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸದಾ ಶ್ರಮಿಸಲಿವೆ’ ಎಂದು ತಿಳಿಸಿದ್ದಾರೆ.

- Advertisement -

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss

Sitemap