ಹೊಸದಿಗಂತ ಡಿಜಿಟಲ್ ಡೆಸ್ಕ್;
ಸಂಸ್ಕೃತ ʻಸತ್ತ ಭಾಷೆʼ ಎಂದು ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಕೇಂದ್ರ ಸರ್ಕಾರ ಕಳೆದ 10 ವರ್ಷಗಳಲ್ಲಿ ಸಂಸ್ಕೃತಕ್ಕೆ 2,400 ಕೋಟಿ ರೂ. ಅನುದಾನ ಮೀಸಲಿಟ್ಟಿದೆ. ಆದ್ರೆ ತಮಿಳಿಗೆ 150 ಕೋಟಿ ರೂ. ಮಾತ್ರ ಮೀಸಲಿಟ್ಟಿದೆ. ಸಂಸ್ಕೃತವನ್ನ ಉತ್ತೇಜಿಸುತ್ತಾ ತಮಿಳು ಭಾಷೆಯನ್ನ ಕೇಂದ್ರವು ಕಡೆಗಣಿಸಿದೆ ಎಂದು ಹೇಳಿದ್ದಾರೆ.
ಮಕ್ಕಳು ತಮಿಳು ಕಲಿಯಲು ಉತ್ಸುಕವಾಗಿದ್ದರೆ, ಹಿಂದಿ ಮತ್ತು ಸಂಸ್ಕೃತವನ್ನ ಕಲಿಯುವಂತೆ ಏಕೆ ಒತ್ತಡ ಹೇರುತ್ತಿದ್ದೀರಿ ಎಂದು ಪ್ರಧಾನಿ ಮೋದಿ ಅವರನ್ನ ನೇರವಾಗಿ ಪ್ರಶ್ನೆ ಮಾಡಿದ್ದಾರೆ. ಉದಯನಿಧಿ ಸ್ಟಾಲಿನ್ ಹೇಳಿಕೆ ಬಳಿಕ ರಾಜಕೀಯ ವಲಯದಲ್ಲೂ ಬಿರುಗಾಳಿ ಎದ್ದಿದೆ. ಬಿಜೆಪಿ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ನಾಯಕಿ ಮತ್ತು ತೆಲಂಗಾಣದ ಮಾಜಿ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಪ್ರತಿಕ್ರಿಯಿಸಿ, ತಮಿಳು ಸಂಸ್ಕೃತಿಯು ಇತರ ಭಾಷೆಗಳನ್ನ ಕೀಳಾಗಿ ನೋಡುವುದನ್ನ ಒಪ್ಪುವುದಿಲ್ಲ. ನಾವು ನಮ್ಮ ಸ್ವಂತ ಭಾಷೆಯನ್ನ ಪ್ರೀತಿಸಬೇಕು, ಇತರ ಭಾಷೆಗಳನ್ನ ಗೌರವಿಸಬೇಕು. ನೀವು ಒಂದು ಭಾಷೆಯನ್ನ ಮೆಚ್ಚುತ್ತೀರಿ ಅಂದ ಮಾತ್ರಕ್ಕೆ ಮತ್ತೊಂದು ಮಾತೃಭಾಷೆಉನ್ನು ಕೀಳಾಗಿ ನೋಡ್ತಿದ್ದೀರಿ ಎಂದರ್ಥವಲ್ಲ ಎಂದು ತಿರುಗೇಟು ನೀಡಿದರು.

