ಸಂತೂರ್‌ ಮಾಂತ್ರಿಕ ಪಂ.ಶಿವಕುಮಾರ್‌ಶರ್ಮ ವಿಧಿವಶ: ಗಣ್ಯರ ಸಂತಾಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪ್ರಖ್ಯಾತ ಸಂತೂರ್‌ ವಾದಕ ಪಂಡಿತ್‌. ಶಿವಕುಮಾರ ಶರ್ಮ ಇಂದು ಕೊನೆಯುಸಿರೆಳೆದಿದ್ದಾರೆ.  ತಮ್ಮ ಅದ್ಭುತ ಸಂತೂರ್ ವಾದನದ ಮೂಲಕ ಪ್ರೇಕ್ಷಕರನ್ನು ಮಂತ್ರ ಮುಗ್ಧವಾಗಿಸುತ್ತಿದ್ದ ಅವರ ಸಾವು ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.

1938 ರಲ್ಲಿ ಜಮ್ಮುವಿನಲ್ಲಿಜನಿಸಿದ ಅವರು ತಮ್ಮ ಐದನೇ ವಯಸ್ಸಿನಿಂದಲೇ ಹಿಂದೂಸ್ಥಾನಿ ತಾಳವಾದ್ಯ ತಬಲಾವನ್ನು ತಮ್ಮ ತಂದೆಯವರಿಂದಲೇ ಕಲಿತರು. ನಂತರ ತಮ್ಮ ಹದಿಮೂರನೇ ವಯಸ್ಸಿನಲ್ಲಿ ಸಂತೂರ್‌ ವಾದನವನ್ನು ಕಲಿತು ಅದರಲ್ಲೇ ಸಾಧನೆ ಮಾಡಿ ವಿಶ್ವದ ಪ್ರೇಕ್ಷಕರಿಗೆ ಸಂಗೀತ ಸುಧೆಯನ್ನು ಉಣಿಸಿದ್ದು ಈಗ ಇತಿಹಾಸ. ಕೇವಲ ವಾದನವಷ್ಟೇ ಅಲ್ಲದೇ ಸಂಗೀತ ಸ್ವರ ಸಂಯೋಜನೆ ಕೂಡ ಅವರಿಗೆ ಕರಗತವಾಗಿತ್ತು. ತಮ್ಮ ವೃತ್ತಿ ಜೀವನದಲ್ಲಿ ಅನೇಕ ಆಲ್ಬಮ್‌ ಗಳನ್ನು ಹೊರತಂದು ಕೊನೆಯುಸಿರುವವರೆಗೂ ಸಂಗೀತೋಪಾಸನೆಯಲ್ಲಿ ತೊಡಗಿಸಿಕೊಂಡಿದ್ದರು. ತಮ್ಮ 84 ನೇ ವಯಸ್ಸಿನಲ್ಲಿ ಹೃದಯಾಘಾತಕ್ಕೆ ತುತ್ತಾಗಿ ಇಹಲೋಕ ತ್ಯಜಿಸಿದ್ದಾರೆ. ಅವರ ಮರಣವು ಸಂಗೀತ ಪ್ರಿಯರಿಗೆ ಅಪಾರ ದುಃಖವನ್ನುಂಟು ಮಾಡಿದೆ.

ಅವರ ಸಾವಿಗೆ ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. “ಪಂಡಿತ್ ಶಿವಕುಮಾರ್ ಶರ್ಮಾ ಜಿಯವರ ನಿಧನದಿಂದ ನಮ್ಮ ಸಾಂಸ್ಕೃತಿಕ ಜಗತ್ತು ಬಡವಾಗಿದೆ. ಅವರು ಜಾಗತಿಕ ಮಟ್ಟದಲ್ಲಿ ಸಂತೂರ್ ಅನ್ನು ಜನಪ್ರಿಯಗೊಳಿಸಿದರು. ಅವರ ಸಂಗೀತ ಮುಂದಿನ ಪೀಳಿಗೆಯನ್ನು ಆಕರ್ಷಿಸುತ್ತಲೇ ಇರುತ್ತದೆ. ಅವರೊಂದಿಗಿನ ನನ್ನ ಸಂವಹನವನ್ನು ನಾನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ” ಎಂದು ಮೋದಿ ತಮ್ಮ ಟ್ವಿಟರಿನಲ್ಲಿ ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!