ಖ್ಯಾತ ಸಂತೂರ್ ಮಾಂತ್ರಿಕ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪಂಡಿತ್ ಭಜನ್ ಸೊಪೋರಿ ನಿಧನ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಖ್ಯಾತ ಸಂತೂರ್ ಮಾಂತ್ರಿಕ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪಂಡಿತ್ ಭಜನ್ ಸೊಪೋರಿ (74) ಗುರುವಾರ ಗುರುಗ್ರಾಮ್​​ನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
1948ರಲ್ಲಿ ಜನಿಸಿದ್ದ ಭಜನ್​ ಮೂಲತಃ ಕಾಶ್ಮೀರದ ಸೊಪೋರಿ ಕಣಿವೆ ಅವರಾಗಿದ್ದು, ಭಾರತೀಯ ಶಾಸ್ತ್ರೀಯ ಸಂಗೀತದ ಸೂಫಿಯಾನ ಘರಾಣೆ ಪರಂಪರೆಗೆ ಸೇರಿದ್ದರು. 1953ರಲ್ಲಿ ತಮ್ಮ ಐದನೇ ವರ್ಷದ ವಯಸ್ಸಿನಲ್ಲೇ ಮೊದಲ ಪ್ರರ್ದಶನ ನೀಡಿದ್ದರು. ದಶಕಗಳ ಕಾಲ ಸಂಗೀತ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಪಂಡಿತ್​ ಭಜನ್​, ಈಜಿಪ್ಟ್, ಇಂಗ್ಲೆಂಡ್, ಜರ್ಮನಿ ಮತ್ತು ಅಮೆರಿಕದಲ್ಲೂ ತಮ್ಮ ಕಛೇರಿ ನಡೆಸಿದ್ದರು. ಅಜ್ಜ ಎಸ್.​ಸಿ.ಸೊಪೋರಿ ಮತ್ತು ತಂದೆ ಶಂಭೂನಾಥ್ ಅವರಿಂದ ಹಿಂದೂಸ್ತಾನಿ ಸಂಗೀತ ಕಲಿತಿದ್ದ ಅವರು, ವಾಷಿಂಗ್ಟನ್ ವಿಶ್ವವಿದ್ಯಾನಿಲಯದಲ್ಲಿ ಪಾಶ್ಚಿಮಾತ್ಯ ಶಾಸ್ತ್ರೀಯ ಸಂಗೀತ ಕಲಿತಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!