ಸ್ಯಾಂಟ್ರೋ ರವಿ ಗುಜರಾತ್ ನಲ್ಲೂ ನಿತ್ಯ ಜಾಗ ಬದಲಿಸುತ್ತಿದ್ದನು: ಎಡಿಜಿಪಿ ಅಲೋಕ್ ಕುಮಾರ್

ಹೊಸದಿಗಂತ ವರದಿ, ಮೈಸೂರು:

ದಲಿತ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿ, ಲೈಂಗಿಕ ದೌರ್ಜನ ನಡೆಸಿದ ಪ್ರಕರಣಕ್ಕೆ ಸಂಬoಧಿಸಿದoತೆ ಕಳೆದ 12 ದಿನಗಳಿಂದ ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿಯನ್ನು ಗುಜರಾತ್‌ನ ಅಹಮದಬಾದ್‌ನಲ್ಲಿ ಕರ್ನಾಟಕ ಪೊಲೀಸರು ಗುಜರಾತ್ ಪೊಲೀಸರ ಸಹಾಯದಿಂದ ಬಂಧಿಸಿದ್ದಾರೆ. ಅಲ್ಲದೇ ಆತನ ಮೂವರು ಸಹಚರರನ್ನೂ ಬಂಧಿಸಲಾಗಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು.

ಶುಕ್ರವಾರ ಸಂಜೆ ಮೈಸೂರಿನ ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಹಲವು ಪ್ರಕರಣಗಳಲ್ಲಿ ಸ್ಯಾಂಟ್ರೋ ರೈವಿಗೆ ಸಹಕರಿಸಿದ್ದ ಕರ್ನಾಟಕದ ಸತೀಶ್ , ಗುಜರಾತ್‌ರಾಮ್ ಜೀ, ಮಧುಸೂಧನ್‌ರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಗುಜರಾತ್‌ನ ನ್ಯಾಯಾಲಯಕ್ಕೆ ಹಾಜರುಪಡಿಸಿ, ವಶಕ್ಕೆ ತೆಗೆದುಕೊಂಡ ಬಳಿಕ, ಮೈಸೂರಿಗೆ ಕರೆತಂದು, ಇನ್ನೇರಡು ದಿನಗಳಲ್ಲಿ ಇಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಿ, ಪೊಲೀಸ್ ಕಷ್ಟಡಿಗೆ ತೆಗೆದುಕೊಂಡು ಮತ್ತಷ್ಟು ವಿಚಾರಣೆ ನಡೆಸಲಾಗುವುದು ಎಂದು ಹೇಳಿದರು.

ಮೈಸೂರಿನ ಪೊಲೀಸ್ ಠಾಣೆಯಲ್ಲಿ ಕಳೆದ 12 ದಿನಗಳ ಹಿಂದೆ ಕೇಸ್ ದಾಖಲಾದ ಬಳಿಕ ಸ್ಯಾಂಟ್ರೋ ರವಿ ರಾಜ್ಯದ ಹಲವೆಡೆಯೂ ಕಾರಿನಲ್ಲಿ ಸುತ್ತಾಡಿದ್ದ. ಆತನಿಗಾಗಿ ಉಡುಪಿ ಶಿವಮೊಗ್ಗ ಎಲ್ಲಾ ಕಡೆ ಹುಡುಕಾಟ ನಡೆದಿತ್ತು. ನಾವು ತಿವ್ರ ಹುಡುಕಾಟ ನಡೆಸಿದ ಬಳಿಕ ಸ್ಯಾಂಟ್ರೋ ರವಿ ಹೊರ ರಾಜ್ಯಕ್ಕೆ ಹೋಗಿದ್ದ. ನಿನ್ನೆ ಮಂತ್ರಾಲಯದಲ್ಲಿ ರವಿ ಆಪ್ತನನ್ನ ಬಂಧಿಸಲಾಗಿತ್ತು. ಸ್ಯಾಂಟ್ರೋ ರವಿ ಗುಜರಾತ್ ನಲ್ಲಿ ನಿತ್ಯ ಜಾಗ ಬದಲಿಸುತ್ತಿದ್ದ. ಸಿಮ್ ಸಹ ಬದಲಾಯಿಸುತ್ತಿದ್ದ, ಅಲ್ಲದೇ ಮೀಸೆ ಬೋಳಿಸಿ, ತಲೆಗೆ ಹಾಕಿಕೊಳ್ಳುತ್ತಿದ್ದ ವಿಗ್‌ನ್ನು ತೆಗೆದಿದ್ದ. ಅಲ್ಲದೇ ಹಲವು ಪ್ರಕರಣಗಳನ್ನು ಎದುರಿಸುತ್ತಿರುವ ಆತ ಜೈಲಿಗೂ ಹೋಗಿ ಬಂದಿದ್ದ. ಇದರಿಂದಾಗಿ ಪೊಲೀಸರ ಬಂಧನದಿoದ ಹೇಗೆ ತಪ್ಪಿಸಿಕೊಳ್ಳಬೇಕು ಎಂಬುದು ಆತನಿಗೆ ಗೊತ್ತಿತ್ತು. ಅದಕ್ಕಾಗಿ ತಂತ್ರಗಳನ್ನು ನಡೆಸುತ್ತಿದ್ದ. ಸ್ಯಾಂಟ್ರೋ ರವಿ ರಾಜ್ಯ ಬಿಟ್ಟು ಬೇರೆ ಕಡೆ ಪ್ರಯಾಣ ಮಾಡಿದ್ದ. ಕೇರಳ, ತೆಲಂಗಾಣ, ಮಹಾರಾಷ್ಟç ಕಡೆಗೆ ಪ್ರಯಾಣ ಮಾಡಿದ್ದ. ರಾಮನಗರ, ಮಂಡ್ಯ, ಮೈಸೂರು ಎಸ್ಪಿ ಕಾರ್ಯಾಚರಣೆ, ರಾಯಚೂರು ಎಸ್ಪಿ ಮಂತ್ರಾಲಯದಲ್ಲಿ ಕಾರ್ಯಾಚರಣೆ ನಡೆಸಿದ್ದರು. ಆದರೆ ಆತ ಗುಜರಾತ್ ಗೆ ಹಾರಿದ್ದ. ಕಾರ್, ಡ್ರೆಸ್, ಚಹರೆ ಎಲ್ಲವನ್ನೂ ಕೂಡ ಸ್ಯಾಂಟ್ರೋ ರವಿ ಬದಲಿಸುತ್ತಿದ್ದ. ಬಿಳಿಬಟ್ಟೆ ಹಾಕಿಕೊಂಡು ಹಾರ್ಡ್ ಕೋರ್ ಕ್ರಿಮಿನಲ್ ಆಗಿದ್ದ.
ಹಾಗಾಗಿ ಆತನನ್ನು ಪತ್ತೆ ಹಚ್ಚಿ ಬಂಧಿಸಲು ವಿಳಂಬವಾಗಿತ್ತು. ಆದರೂ 11 ಮಂದಿ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ತನಿಖಾ ತಂಡವು ಕಷ್ಟ ಪಟ್ಟು ಆತನನ್ನು ಗುಜರಾತ್‌ನಲ್ಲಿ ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದರು.

ಈತನ ಬಂಧನಕ್ಕಾಗಿ ಎಸಿಪಿ ಶಿವಶಂಕರ್ , ಅಶ್ವತ್ ನಾರಾಯಣ್ ನೇತೃತ್ವದ ತಂಡ, ಇನ್ಸ್ ಪೆಕ್ಟರ್ ಗಳಾದ ರಾಜು, ದಿವಾಕರ್, ಮಲ್ಲೇಶ್, ಸಂತೋಷ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಎನ್ ಆರ್ ಠಾಣಾಧಿಕಾರಿ ಅಜರುದ್ದೀನ್, ಮೇಟಗಳ್ಳಿಯ ದಿವಾಕರ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು ಎಂದು ತಿಳಿಸಿದರಲ್ಲದೆ, ಕಾರ್ಯಾಚರಣೆಯಲ್ಲಿ ಪಾಲ್ಗೊಂಡವರಿಗೆ ಬಹುಮಾನ ಘೋಷಣೆ ಮಾಡಿದರು.

ಸ್ಯಾಂಟ್ರೋ ರವಿ ಬಂಧಿಸಿ ರಾಜ್ಯದ ಪೊಲೀಸರ ಗೌರವ ಉಳಿಸಿದ್ದಾರೆ. ಆತ ಕ್ರಿಮಿನಲ್ ಇದ್ದ. ಆತನನ್ನ ಚೇಸ್ ಮಾಡಿ ಹಿಡಿದಿದ್ದೀವಿ. ಒಡನಾಡಿ ಸಂಸ್ಥೆ ಸೇರಿ ಹಲವೆಡೆ ಮಾತನಾಡಿದ್ದೇವೆ. ಸ್ಯಾಂಟ್ರೋ ರವಿಗೆ ಸೇರಿದ ಬೆಂಗಳೂರಿನ ಆರ್.ಆರ್.ನಗರ, ಮೈಸೂರಿನ ದಟ್ಟಗಳ್ಳಿಯ ಎರಡು ಮನೆ ಸರ್ಚ್ ಮಾಡಲಾಗಿತ್ತು. ಹಲವು ವಸ್ತುಗಳು ಕೂಡ ಸಿಕ್ಕಿವೆ. 2005ರಲ್ಲೇ ಗೂಂಡಾ ಕಾಯ್ದೆಯಡಿ ಸ್ಯಾಂಟ್ರೋ ರವಿ ಬಂಧಿಸಲಾಗಿತ್ತು. ಆ ಪ್ರಕರಣ ಸೇರಿದಂತೆ ಹಲವು ಕೇಸ್‌ಗಳು ಆತನ ಮೇಲಿವೆ, ಯಾವ್ಯಾವ ಕೇಸ್‌ಗಳಿವೆ ಎಂಬುದನ್ನು ಪರಿಶೀಲನೆ ಮಾಡಿ, ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸುತ್ತೇವೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಭಾನೋತ್ ಸೇರಿದಂತೆ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!