‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾದ ಸೈಡ್‌-ಬಿ ಇಂದು ತೆರೆಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಸ್ಯಾಂಡಲ್‌ವುಡ್​ನ ಸಿಂಪಲ್​ ಸ್ಟಾರ್​, ನಟ ರಕ್ಷಿತ್ ಶೆಟ್ಟಿ ಮತ್ತು ನಟಿ ರುಕ್ಮಿಣಿ ವಸಂತ್ ನಟಿಸಿರುವ ಬಹುನಿರೀಕ್ಷಿತ ‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಬಿ ಚಿತ್ರ ಇಂದು ತೆರೆ ಕಾಣುತ್ತಿದೆ.

‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್​ ಬಿ ಸೀಕ್ವೆಲ್ ಹಿಂದಿ ಹೊರತುಪಡಿಸಿ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ.

ಚಿತ್ರದಲ್ಲಿ ರಕ್ಷಿತ್​ ಶೆಟ್ಟಿ, ಚೈತ್ರ ಜೆ.ಆಚಾರ್, ರುಕ್ಮಿಣಿ ವಸಂತ್, ಶರತ್​ ಲೋಹಿತಾಶ್ವ ಸೇರಿದಂತೆ ಮುಂತಾದವರು ಕಾಣಿಸಿಕೊಂಡಿದ್ದಾರೆ. ಪರಂವಾ ಸ್ಟುಡಿಯೋಸ್ ನಿರ್ಮಿಸಿದ ಈ ಚಿತ್ರಕ್ಕೆ ಚರಣ್‌ ರಾಜ್‌ ಸಂಗೀತ, ಅದ್ವೈತ ಗುರುಮೂರ್ತಿ ಛಾಯಾಗ್ರಹಣ ನೀಡಿದ್ದಾರೆ.

ಚಿತ್ರದ ಸೈಡ್‌-ಎ ನಲ್ಲಿ ಜೈಲು ಸೇರಿದ್ದ ನಾಯಕ ಜೈಲಿನಿಂದ ಹೊರಬಂದ ನಂತರ ನಡೆಯುವ ಕಥೆಯನ್ನು ಸೈಡ್‌-ಬಿ ಹೊಂದಿದೆ. ಸಿನಿಮಾದ ಮೊದಲ ಭಾಗವನ್ನು ಮೆಚ್ಚಿದ ಅಭಿಮಾನಿಗಳು ಎರಡನೇ ಭಾಗಕ್ಕೆ ಕಾತುರದಿಂದ ಕಾಯುತ್ತಿದ್ದು, ಇಂದು ಅಭಿಮಾನಗಳು ಚಿತ್ರಮಂದಿರದತ್ತ ಧಾವಿಸಿ ಚಲನಚಿತ್ರವನ್ನು ವೀಕ್ಷಿಸುವ ಸಮಯ ಬಂದಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!