ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ಬಾಗಿಲು ಓಪನ್, 41 ದಿನ ಮಂಡಲ ಪೂಜೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಶಬರಿಮಲೆಯ ಅಯ್ಯಪ್ಪಸ್ವಾಮಿ ದೇಗುಲದ ಬಾಗಿಲು ತೆರೆಯಲಾಗಿದ್ದು, ಇಂದಿನಿಂದ 41 ದಿನಗಳ ಕಾಲ ತೀರ್ಥಯಾತ್ರೆ ಆರಂಭವಾಗಲಿದೆ.

ಬೇರೆ ಬೇರೆ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಅಯ್ಯಪ್ಪಸ್ವಾಮಿ ದರುಶನಕ್ಕೆ ಆಗಮಿಸಲಿದ್ದು, ನಿನ್ನೆ ಸಂಜೆ ದೇಗುಲದ ಮುಖ್ಯ ಅರ್ಚಕ ಮಹೇಶ್ ಮೋಹನರು ದೇಗುಲದ ಗರ್ಭಗುಡಿಯ ಬಾಗಿಲನ್ನು ತೆರೆದಿದ್ದಾರೆ.

ಲಕ್ಷಾಂತರ ಭಕ್ತರು ಈಗಾಗಲೇ ಅಯ್ಯಪ್ಪನ ದರುಶನಕ್ಕೆ ಕಾದು ಕುಳಿತಿದ್ದು, ಮಲಯಾಳಂ ಕ್ಯಾಲೆಂಡರ್ ಪ್ರಕಾರ 41 ದಿನ ದೇಗುಲದಲ್ಲಿ ಮಂಡಳ ಪೂಜೆ ಹಾಗೂ ಮಕರವಿಳಕ್ಕು ಯಾತ್ರೆ ಆರಂಭವಾಗಲಿದೆ.

ಜನವರಿಯಲ್ಲಿ ಮಕರ ಸಂಕ್ರಾಂತಿ ಹಬ್ಬದಂದು ಲಕ್ಷಾಂತರ ಮಂದಿ ಅಯ್ಯಪ್ಪನ ದರುಶನ ಪಡೆಯಲಿದ್ದಾರೆ. ಈಗಾಗಲೇ ಭಕ್ತರು ಪಂಪಾ ನದಿಯಲ್ಲಿ ಮಿಂದು ದೇಗುಲದ ಮೆಟ್ಟಿಲು ಏರಿದ್ದಾರೆ.

ಭಕ್ತರಿಗೆ ತೊಂದರೆಯಾಗದಂತೆ ಆಡಳಿತ ಮಂಡಳಿ ವ್ಯವಸ್ಥೆ ಮಾಡಿದ್ದು, ಮೂಲಸೌಕರ್ಯ, ಆಸ್ಪತ್ರೆ, ಶೌಚಾಲಯ ಹಾಗೂ ಪಾರ್ಕಿಂಗ್ ವ್ಯವಸ್ಥೆಯಲ್ಲಿ ಹೆಚ್ಚು ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!