12 ವರ್ಷದ ಬಳಿಕ ಕೇರಳಕ್ಕೆ ‘ಸರಸ್ವತಿ ಸಮ್ಮಾನ್’: ಸಾಹಿತಿ ಪ್ರಭಾ ವರ್ಮ ಮುಡಿಗೆ ಪ್ರಶಸ್ತಿಯ ಗರಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅತ್ಯಂತ ಪ್ರತಿಷ್ಠಿತ ಸಾಹತ್ಯ ಪ್ರಶಸ್ತಿಯಾದ ಸರಸ್ವತಿ ಸಮ್ಮಾನ್ ಬರೋಬ್ಬರಿ ೧೨ ವರ್ಷಗಳ ಬಳಿಕ ಕೇರಳಕ್ಕೆ ಒಲಿದಿದ್ದು, ಕವಿ, ಸಾಹಿತಿ ಪ್ರಭಾ ವರ್ಮ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಭಾ ವರ್ಮ ಅವರ ರೌದ್ರ ಸಾತ್ವಿಕಂ ಎಂಬ ಕೃತಿಗೆ ಪ್ರಶಸ್ತಿ ಒದಗಿ ಬಂದಿದೆ. ಕೆಕೆ ಬಿರ್ಲಾ ಫೌಂಡೇಶನ್ ನೀಡುವ ಈ ಪ್ರಶಸ್ತಿಯು ೧೫ ಲಕ್ಷ ರೂ. ನಗದು, ಫಲಕ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವರ್ವ, ರಾಷ್ಟ್ರಮಟ್ಟದಲ್ಲಿ ಇದೊಂದು ದೊಡ್ಡ ಮನ್ನಣೆಯಾಗಿದೆ. ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ ಎಂದಿದ್ದಾರೆ. ಕೇರಳದಲ್ಲಿ ಈ ಹಿಂದೆ ಬಾಲಾಮಣಿ ಅಮ್ಮ, ಅಯ್ಯಪ್ಪಪಣಿಕ್ಕರ್ ಹಾಗೂ ಸುಗತಕುಮಾರಿ ಅವರಿಗೆ ಈ ಪ್ರಶ್ತಸ್ತಿ ನೀಡಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!