Sunday, June 4, 2023

Latest Posts

CINE| ಶರತ್‌ ಬಾಬುಗೆ ಸಂತಾನ ಭಾಗ್ಯವಿಲ್ಲ, ಯಾರ ಪಾಲಾಗಲಿದೆ ಗೊತ್ತಾ ಕೋಟಿ ಕೋಟಿ ಆಸ್ತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಖ್ಯಾತ ಹಿರಿಯ ನಟ ಶರತ್ ಬಾಬು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಶರತ್ ಬಾಬು ಅವರ ಸಾವು ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ತೀವ್ರ ದುಃಖವನ್ನು ತುಂಬಿದೆ. ಕಮಲ್, ರಜಿನಿ, ಚಿರಂಜೀವಿ ಮುಂತಾದ ಸ್ಟಾರ್ ಹೀರೋಗಳೂ ಶರತ್ ಬಾಬು ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಶರತ್ ಬಾಬು ಸುಮಾರು 300 ದಕ್ಷಿಣ ಭಾಷೆಯ ಚಿತ್ರಗಳಲ್ಲಿ ನಾಯಕ, ಖಳನಾಯಕ ಮತ್ತು ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ನಟಿಸಿದ್ದಾರೆ. ಈ ವೇಳೆ ಅವರು ಸಂಪಾದಿಸಿದ ಕೋಟಿ ಕೋಟಿ ಆಸ್ತಿ ವಾರಸುದಾರರಿಲ್ಲದೆ ಇತರರ ಪಾಲಾಗಲಿದೆ.

ಶರತ್ ಬಾಬು ದಾಂಪತ್ಯ ಜೀವನ ಸುಖಮಯವಾಗಿಲ್ಲ. ಮೊದಲು ರಮಾಪ್ರಭಾ ಅವರನ್ನು ಮದುವೆಯಾಗಿ ಕೆಲವು ವರ್ಷಗಳ ನಂತರ ಬೇರ್ಪಟ್ಟರು. ನಂತರ ಶರತ್ ಬಾಬು ಸ್ನೇಹಾಳನ್ನು ಮದುವೆಯಾಗಿ ಆಕೆಯಿಂದಲೂ ವಿಚ್ಛೇದನ ಪಡೆದರು. ಇಬ್ಬರಿಗೂ ಮಕ್ಕಳಿಲ್ಲದ ಕಾರಣ ಆಸ್ತಿ ಯಾರ ಪಾಲಾಗಲಿದೆ ಎಂಬುದು ಪ್ರಶ್ನೆ.

ಚೆನ್ನೈ, ಹೈದರಾಬಾದ್ ಇತರ ಕಡೆ ಮನೆ ಮತ್ತು ಆಸ್ತಿಯನ್ನು ಹೊಂದಿದ್ದಾರೆ. ಶರತ್ ಬಾಬು ಜೊತೆಯಲ್ಲಿ 13 ಸಹೋದರರು ಮತ್ತು ಸಹೋದರಿಯರು ಇದ್ದಾರೆ ಮತ್ತು ಅವರ ಮಕ್ಕಳ ಶಿಕ್ಷಣ ಮತ್ತು ಮದುವೆಗೆ ಶರತ್ ಬಾಬು ಸಹಾಯ ಮಾಡಿದ್ದರು.

ಇತ್ತೀಚೆಗಷ್ಟೇ ಶರತ್ ಬಾಬು ಅಂತ್ಯಕ್ರಿಯೆ ವೇಳೆ ಅವರ ಕೆಲವು ಸಹೋದರರು ಆಸ್ತಿ ವಿಚಾರ ಕೇಳಿದಾಗ ಈಗ ಮಾತನಾಡುವ ಸಮಯವಲ್ಲ, ಉಯಿಲು ಬರೆದರೆ ಅದರ ಪ್ರಕಾರ ಆಗುತ್ತದೆ, ಇಲ್ಲವಾದಲ್ಲಿ ನಮ್ಮ ಮನೆಯವರೆಲ್ಲಾ ಕೂತು ಮಾತನಾಡುತ್ತೇವೆ ಎಂದಿದ್ದರು.  ಇದರೊಂದಿಗೆ ಶರತ್ ಬಾಬು ಅವರ ಕೋಟ್ಯಂತರ ಮೌಲ್ಯದ ಆಸ್ತಿ ಪಾಲಾಗಿದೆ ಅಕ್ಕ-ತಂಗಿಯರ ಪಾಲಾಗುತ್ತದೆ ಎಂಬ ಮಾತು ಕೇಳಿ ಬರುತ್ತಿದೆ. ಆದರೆ, ಈ ಆಸ್ತಿಗಾಗಿ ಇವರ ನಡುವೆ ಜಗಳ ನಡೆದಿರಬಹುದು ಎಂದು ತಮಿಳು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಈಗಾಗಲೇ ಆ ಜಗಳಗಳು ನಡೆಯುತ್ತಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!