ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಕ್ಸ್ ಆಫೀಸ್‌ನಲ್ಲಿ ಭಾರೀ ಹೈಪ್ ಸೃಷ್ಟಿ ಮಾಡಿ ಥಿಯೇಟರ್‌ಗೆ ಬಂದಿದ್ದ ಕಾರ್ತಿ ಮತ್ತು ಎಸ್.ಜೆ. ಸೂರ್ಯ ಅವರ ‘ಸರ್ದಾರ್ 2’ ಸಿನಿಮಾ ಈಗ ಗಲ್ಲಾಪೆಟ್ಟಿಗೆಯಲ್ಲಿ ತೀರಾ ಮಂಕಾಗಿ ಹೋಗಿದೆ. ಮೊದಲ ಭಾಗ ಸೂಪರ್ ಹಿಟ್ ಆಗಿದ್ದರಿಂದ ಈ ಸೀಕ್ವೆಲ್ ಮೇಲೆ ಜನರಿಗೆ ಬೆಟ್ಟದಷ್ಟು ನಿರೀಕ್ಷೆ ಇತ್ತು. ಆದರೆ ರಿಲೀಸ್ ಆದ ಮೊದಲ ವೀಕೆಂಡ್‌ನಲ್ಲೇ ಅಂದುಕೊಂಡ ಮಟ್ಟಕ್ಕೆ ಕಲೆಕ್ಷನ್ ಮಾಡಲಾಗದೆ ಸಿನಿಮಾ ತರಗೆಲೆಯಂತೆ ತೇಲಿಹೋಗಿದೆ.
ಮಂಗಳವಾರ (6ನೇ ದಿನ) ಈ ಸಿನಿಮಾ ಗಳಿಸಿದ್ದು ಬರೀ 1 ಕೋಟಿ ರೂಪಾಯಿ ಮಾತ್ರ. ದೇಶಾದ್ಯಂತ ಇಲ್ಲಿಯವರೆಗೆ ಗಳಿಸಿರೋ ಒಟ್ಟು ಕಲೆಕ್ಷನ್ ಬರೀ 16 ಕೋಟಿ ಅಷ್ಟೇ.
ಬರಿ ಹೈಪ್ ನೆಚ್ಚಿಕೊಂಡು ಬಂದ ಈ ಸಿನಿಮಾಗೆ ಅಸಲಿ ಪೆಟ್ಟು ಕೊಟ್ಟಿದ್ದು ಸೂರಿ ಮತ್ತು ಸುಹಾಸ್ ಅಭಿನಯದ ‘ಮಂಡಾಡಿ’ ಸಿನಿಮಾ. ಒಂದೇ ದಿನ ರಿಲೀಸ್ ಆದ ಈ ಎರಡು ಸಿನಿಮಾಗಳ ನಡುವೆ ಟಫ್ ಕಾಂಪಿಟೇಷನ್ ಇತ್ತು. ಜನ ‘ಮಂಡಾಡಿ’ ಚಿತ್ರದ ಕಂಟೆಂಟ್ ನೋಡಿ ಖುಷಿಪಟ್ಟು ಥಿಯೇಟರ್‌ಗೆ ಹೆಚ್ಚು ಹೋದ್ರೆ, ‘ಸರ್ದಾರ್ 2’ ಕಡೆ ಮುಖ ಮಾಡೋರ ಸಂಖ್ಯೆ ಪೂರ್ತಿ ಕಮ್ಮಿ ಆಗಿಹೋಯ್ತು.
ಕಥೆಯ ವಿಷಯಕ್ಕೆ ಬಂದ್ರೆ, ಈ ಬಾರಿ ವಿಜಿ ಅಲಿಯಾಸ್ ವಿಜಯ್ ಪ್ರಕಾಶ್ ಅನ್ನೋ ಏಜೆಂಟ್, ‘ಬ್ಲ್ಯಾಕ್ ಡ್ಯಾಗರ್’ ಅನ್ನೋ ಭೀಕರ ಶತ್ರುವನ್ನು ಮಟ್ಟಹಾಕಲು ಕಣಕ್ಕಿಳಿಯುತ್ತಾನೆ. ಮೂವರು ಏಜೆಂಟ್‌ಗಳ ಬಳಿ ಇರುವ ಕೀಗಳನ್ನು ಬಳಸಿ, ‘ಡೊಕು’ ಅನ್ನೋ ಮಾರಕ ಬಯೋಲಾಜಿಕಲ್ ಅಸ್ತ್ರವನ್ನು ಹುಡುಕಿ ಪ್ರಪಂಚವನ್ನು ಉಳಿಸುವುದೇ ಈ ಚಿತ್ರದ ಮೇನ್ ಪ್ಲಾಟ್. ಈ ಮಿಷನ್‌ನಲ್ಲಿ ವಿಜಿಗೆ ಆತನ ಅಪ್ಪ ‘ಚಂದ್ರ ಬೋಸ್ ಅಲಿಯಾಸ್ ಸರ್ದಾರ್’ ಸಾಥ್ ನೀಡುತ್ತಾನೆ. ಮಾಳವಿಕಾ ಮೋಹನನ್, ಆಶಿಕಾ ರಂಗನಾಥ್ ಮತ್ತು ರಜೀಷಾ ವಿಜಯನ್ ಅಂತ ದೊಡ್ಡ ತಾರಾಗಣವೇ ಸಿನಿಮಾದಲ್ಲಿದ್ದರೂ, ಕಥೆಯಲ್ಲಿ ಹೊಸತನ ಇಲ್ಲದ ಕಾರಣ ಪ್ರೇಕ್ಷಕರು ಥಿಯೇಟರ್‌ನಿಂದ ದೂರವೇ ಉಳಿದಿದ್ದಾರೆ.
ದೊಡ್ಡ ಸೀಕ್ವೆಲ್ ಬ್ರ್ಯಾಂಡ್ ಹೊಂದಿದ್ದರೂ, ಕಂಟೆಂಟ್ ಸರಿ ಇಲ್ಲದಿದ್ದರೆ ಜನ ಒಪ್ಪಲ್ಲ ಅನ್ನೋದಕ್ಕೆ ‘ಸರ್ದಾರ್ 2’ ಚಿತ್ರದ ಈ ಬಾಕ್ಸ್ ಆಫೀಸ್ ಸ್ಥಿತಿಯೇ ಬೆಸ್ಟ್ ಎಕ್ಸಾಂಪಲ್.



