Thursday, March 23, 2023

Latest Posts

ಭರವಸೆಯ ಬೆಳಕು: ಅವಶೇಷಗಳಡಿ ಸಿಲುಕಿ ಮೃತ್ಯುವನ್ನೇ ಗೆದ್ದು ಬಂದ ಮಗುವಿನ ನಗು ನೋಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಕ್ಷಸ ರೂಪ ಭೂಕಂಪಕ್ಕೆ ಟರ್ಕಿ ಮತ್ತು ಸಿರಿಯಾ ಜನ ಅಕ್ಷರಶಃ ನಲುಗಿದ್ದಾರೆ. ನೀರು, ಆಹಾರ ಸಹಾಯಕ್ಕಾಗಿ ಅಂಗಲಾಚುತ್ತಾ ಅವಶೇಷಗಳಡಿಯಲ್ಲಿ ಸಿಲುಕಿರುವವರನ್ನು ರಕ್ಷಣಾ ತಂಡಗಳು ರಕ್ಷಿಸುತ್ತಿವೆ.

ನವಜಾತ ಶಿಶು, ಯುವಕರು, ವೃದ್ಧರೆನ್ನದೆ ಸಾವಿರಾರು ಮಂದಿ ಶಿಥಿಲಗಳ ಕೆಳಗೆ ಸಿಕ್ಕಿದ್ದಾರೆ. ಈ ನಡುವೆ ಎರಡು ತಿಂಗಳ ಗಂಡು ಮಗುವೊಂದನ್ನು ಭಾನುವಾರ ಅವಶೇಷಗಳಿಂದ ಹೊರಗೆ ತೆಗೆಯಲಾಗಿದೆ. ಸುಮಾರು ಐದು ದಿನಗಳಿಂದ ಹಾಲು ಇಲ್ಲದೆ ಮಗು ಬದುಕುಳಿದಿರುವುದು ಗಮನಾರ್ಹ. ಮಗುವನ್ನು ಹೊರತೆಗೆದಾಗ ರಕ್ತ ಮತ್ತು ಸಣ್ಣ ಗಾಯಗಳೊಂದಿಗೆ ಒದ್ದಾಡುತ್ತಿತ್ತು.

ತಂಡಗಳು ಮಗುವನ್ನು ರಕ್ಷಿಸಿ ರಕ್ಷಣಾ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ. ಅಲ್ಲಿ ವೈದ್ಯಕೀಯ ಮತ್ತು ಸಹಾಯಕ ಸಿಬ್ಬಂದಿ ಮಗುವಿಗೆ ಸೂಕ್ತ ಚಿಕಿತ್ಸೆ ನೀಡಿದರು. ಬಹಳ ದಿನಗಳ ನಂತರ ಹೊಟ್ಟೆ ತುಂಬ ಹಾಲು ಕುಡಿದ ಮಗುವಿನ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಅವನ ಮುಖದಲ್ಲಿ ಸಂತೋಷ ಕಾಣುತ್ತಿತ್ತು. ಆರೋಗ್ಯವಂತ ಮಗುವಿನ ವಿಡಿಯೋ ಕೂಡ ವೈರಲ್ ಆಗುತ್ತಿದೆ.

ಭೂಕಂಪದಿಂದ ಸುರಕ್ಷಿತವಾಗಿ ಪಾರಾದ ಮಗುವಿನ ನಗುಮೊಗದ ವಿಡಿಯೋ ಇದೀಗ ನೆಟ್ಟಿಗರ ಮನಸೂರೆಗೊಳ್ಳುತ್ತಿದೆ. ಮಗುವಿನ ಖುಷಿ ನೋಡಿ ನೆಟ್ಟಿಗರು ಕೂಡ ಖುಷಿಯಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!