ಉಡಾಯಿಸು ಉಪಗ್ರಹ- ಭಾರತದ ಭವಿಷ್ಯದ ಉದ್ಯಮವಿದು!

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಸಾಫ್ಟವೇರ್, ಎಡುಟೆಕ್ ಹೀಗೆಲ್ಲ ಯಾವೆಲ್ಲ ಉದ್ಯಮಗಳು ಬೆಳೆಯಲಿವೆ, ಆ ವಲಯಗಳಲ್ಲಿ ಭವಿಷ್ಯ ಇರಲಿದೆ ಎಂದೆಲ್ಲ ಅಂದಾಜುಗಳನ್ನು ನೀವು ಓದಿರಲಿಕ್ಕೆ ಸಾಕು. ಸ್ಪೇಸ್ ಟೆಕ್ ಎನ್ನುವುದು ಈ ನಿಟ್ಟಿನಲ್ಲಿ ಭಾರಿ ಭವಿಷ್ಯವನ್ನು ಬಿಂಬಿಸುತ್ತಿರುವ ವಲಯ. 

2020ರಲ್ಲಿ 9.6 ಬಿಲಿಯನ್ ಡಾಲರ್ ವಹಿವಾಟು ಇರುವ ಈ ಉದ್ದಿಮೆ 2025ರಲ್ಲಿ 13 ಬಿಲಿಯನ್ ಡಾಲರ್ ತಲುಪಲಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.

ಸ್ಪೇಸ್ ಟೆಕ್ ಎಂದರೆ ಅದರಲ್ಲಿ ಹಲವು ಆಯಾಮಗಳಿವೆ. ಮುಖ್ಯವಾಗಿ ಬೇರೆ ದೇಶಗಳು ಮತ್ತು ಸಂಸ್ಥೆಗಳು ತಮ್ಮ ಉಪಗ್ರಹವನ್ನು ಕಕ್ಷೆಯಲ್ಲಿ ಕೂರಿಸುವುದಕ್ಕೆ ಭಾರತದ ಸಹಾಯ ಪಡೆಯಲಿವೆ. ಇದು ಉದ್ಯಮದ ಮುಖ್ಯ ಭಾಗ. ಈ ಉಪಗ್ರಹಗಳನ್ನು ಭಾರತದಲ್ಲೇ ತಯಾರಿಸುವುದು ಹಾಗೂ ಅದರ ಸುತ್ತಮುತ್ತಲಿನ ತಾಂತ್ರಿಕ ಅವಶ್ಯಗಳ ಪೂರೈಕೆ ಸಹ ಉದ್ದಿಮೆ ಅವಕಾಶಗಳನ್ನು ನೀಡಲಿದೆ.

ಮೋದಿ ಸರ್ಕಾರ ಅದಾಗಲೇ ಬಾಹ್ಯಾಕಾಶ ವಿಭಾಗದಲ್ಲಿ ಭಾರತದ ಖಾಸಗಿ ವಲಯವೂ ಪ್ರವೇಶಿಸುವುದಕ್ಕೆ ಅನುವಾಗುವಂತೆ ಸುಧಾರಣೆಗಳನ್ನು ತಂದಿದೆ. ಇವತ್ತಿಗೆ ಭಾರತದಲ್ಲಿ ನೂರಕ್ಕೂ ಮಿಕ್ಕಿದ ಸ್ಪೇಸ್ ಟೆಕ್ ಸಂಬಂಧಿತ ನವೋದ್ದಿಮೆಗಳಿವೆ. 2021ರ ವರ್ಷವೊಂದರಲ್ಲೇ 47 ನವೋದ್ದಿಮೆಗಳು ಈ ವಿಭಾಗದಲ್ಲಿ ಹುಟ್ಟಿಕೊಂಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!