ಅಮೃತಯಾತ್ರೆ: ಮಕ್ಕಳನ್ನು ಉಳಿಸಿಕೊಳ್ಳುವಲ್ಲಿ ಹೆಚ್ಚಾದ ಭಾರತದ ಕ್ಷಮತೆ

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಸ್ವಾತಂತ್ರ್ಯದ ಅಮೃತಮಹೋತ್ಸವದ ಹೊತ್ತಿನಲ್ಲಿ ಭಾರತದ ಬಗ್ಗೆ ಹೆಮ್ಮೆ ಪಡಬಹುದಾದ ಸಂಗತಿಗಳಲ್ಲೊಂದು ಶಿಶುಮರಣ ಪ್ರಮಾಣದಲ್ಲಾಗಿರುವ ಬದಲಾವಣೆ ಅಥವಾ ಸುಧಾರಣೆ.

1951ರಲ್ಲಿ 1000ಕ್ಕೆ 146 ಶಿಶುಗಳು ಮರಣ ಹೊಂದುತ್ತಿದ್ದವು. 2022ರಲ್ಲಿ ಆ ಪ್ರಮಾಣವು ಸಾವಿರಕ್ಕೆ 28ಕ್ಕೆ ಬಂದು ನಿಂತಿದೆ.

ಇದರಲ್ಲಿ ಈವರೆಗಿನ ಎಲ್ಲ ಸರ್ಕಾರಗಳ ಕೊಡುಗೆ ಇದೆ. 

ನವಜಾತ ಶಿಶುಗಳಿಗೆ ಬೇಕಾಗುವ ಆರೋಗ್ಯ ಸವಲತ್ತುಗಳ ವಿಸ್ತರಣೆ, ಬಹಳ ಮುಖ್ಯವಾಗಿ ರೋಗಗಳ ವಿರುದ್ಧ ಲಸಿಕಾಕರಣಗಳು ಶಿಶುಮರಣವನ್ನು ತಗ್ಗಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿವೆ. 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!