ವಿಶ್ವಕಪ್ | ಗೆಲುವಿನ ಸಂಭ್ರಮ ಆಚರಿಸಲು ದೇಶಕ್ಕೇ ರಜೆ ಘೋಷಿಸಿದ ಸೌದಿ ದೊರೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಫಿಫಾ ವಿಶ್ವಕಪ್‌ನಲ್ಲಿ ಕೂಟದ ಬಲಿಷ್ಠ ತಂಡ ಅರ್ಜೆಂಟೀನಾ ವಿರುದ್ಧ 2-1 ಗೋಲುಗಳಿಂದ ಗೆಲ್ಲುತ್ತಿದ್ದಂತೆ ಸೌದಿ ಅರೇಬಿಯಾದಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ. ಇದೇ ಖುಷಿಯಲ್ಲಿ ಸೌದಿ ಅರೇಬಿಯಾದ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಬುಧವಾರ ಇಡೀ ದೇಶಕ್ಕೆ ಸಂಭ್ರಮಾಚರಣೆಗೆಂದೇ ರಾಷ್ಟ್ರೀಯ ರಜೆ ಘೋಷಿಸಿದ್ದಾರೆ.
ಇಂದು ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಉದ್ಯೋಗಿಗಳಿಗೆ ರಜೆ ನೀಡಲಾಗಿದೆ. ಶಾಲೆಗಳು ಸಹ ಮುಚ್ಚಲ್ಪಡುತ್ತವೆ. ಮಂಗಳವಾರ ನಗರದ ಪ್ರಮುಖ ಥೀಮ್ ಪಾರ್ಕ್‌ಗಳು ಮತ್ತು ಮನರಂಜನಾ ಕೇಂದ್ರಗಳಲ್ಲಿ ಪ್ರವೇಶ ಶುಲ್ಕವನ್ನು ಸಹ ಮನ್ನಾ ಮಾಡಲಾಗುವುದು ಎಂದು ಘೋಷಿಸಲಾಗಿದೆ.
ಕತಾರ್‌ನ ಲುಸೈಲ್ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಅಚ್ಚರಿಯ ಫಲಿತಾಮಶ ದಾಖಲಾಗಿತ್ತು. ಯಾವು ಊಹೆ ಮಾಡಿರದ ರೀತಿಯಲ್ಲಿ ಲಿಯೋನೆಲ್‌ ಮೆಸ್ಸಿ ಪಡೆ ವಿರುದ್ಧ ತಿರುಗಿಬಿದ್ದಿದ್ದ ಸೌದಿ 2-1 ರ ಅಂತರದಲ್ಲಿ ಐತಿಹಾಸಿಕ ಗೆಲುವು ದಾಖಲಿಸಿತ್ತು. ಸೌದಿ ಪರ 48ನೇ ನಿಮಿಷದಲ್ಲಿ ಸಲೇಹ್ ಅಲ್-ಶೆಹ್ರಿ, ಸಿ 53ನೇ ನಿಮಿಷದಲ್ಲಿ ಸೇಲಂ ಅಲ್ದಾವ್ಸರಿ ತಲಾ ಒಂದು ಗೋಲು ಸಿಡುಸುವ ಮೂಲಕ ಗೆಲುವಿನ ರುವಾರಿಗಳಾಗಿ ಮೂಡಿಬಂದಿದ್ದರು.
ಈ ಗೆಲುವಿನ ಬೆನ್ನಲ್ಲೇ ರಾಜಧಾನಿ ರಿಯಾದ್‌ನಾದ್ಯಂತ ಸಂಭ್ರಮಾಚರಣೆಗಳು, ಹರ್ಷೋದ್ಘಾರಗಳು ಭುಗಿಲೆದ್ದಿದ್ದವು. ಅಭಿಮಾನಿಗಳು ನೃತ್ಯ ಮಾಡಿ ಸಾರ್ವಜನಿಕವಾಗಿ ರಾಷ್ಟ್ರಧ್ವಜ ಬೀಸಿ ಸಂಭ್ರಮಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!