Tuesday, March 28, 2023

Latest Posts

ಮೂರನೇ ತ್ರೈಮಾಸಿಕ ಲಾಭದಲ್ಲಿ 62 ಶೇಕಡಾ ಏರಿಕೆ ದಾಖಲಿಸಿದೆ ಎಸ್‌ಬಿಐ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ದೇಶದ ಅತಿದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು 2022 ರ ಡಿಸೆಂಬರ್‌ ತಿಂಗಳಲ್ಲಿ ಕೊನೆಗೊಂಡ ತ್ರೈಮಾಸಿಕದಲ್ಲಿ ತನ್ನ ನಿವ್ವಳ ಲಾಭದಲ್ಲಿ ಶೇಕಡಾ 62 ರಷ್ಟು ಏರಿಕೆ ದಾಖಲಿಸಿದ್ದು ಒಟ್ಟಾರೆ 15,477 ಕೋಟಿ ರೂ. ಲಾಭ ಗಳಿಸಿರುವುದಾಗಿ ಹೇಳಿದೆ.

ಹಿಂದಿನ ವರ್ಷದ ಇದೇ ಅವಧಿಯಲ್ಲಿ ಎಸ್‌ಬಿಐ 8,432 ಕೋಟಿ ರೂಪಾಯಿಗಳಷ್ಟು ಲಾಭ ಗಳಿಸಿತ್ತು. 2022ರ ಜುಲೈ-ಸೆಪ್ಟೆಂಬರ್ ಎರಡನೇ ತ್ರೈಮಾಸಿಕದಲ್ಲಿ13,265 ಕೋಟಿ ರೂ. ಲಾಭ ಗಳಿಸಿದ್ದ ಎಸ್‌ಬಿಐ ಮೂರನೇ ತ್ರೈಮಾಸಿಕದಲ್ಲಿ ಹೆಚ್ಚಿನ ಲಾಭ ಗಳಿಸಿರುವುದಾಗಿ ಹೇಳಿಕೊಂಡಿದೆ.

ಎಸ್‌ಬಿಐ ವರದಿ ಮಾಡಿರುವ ಪ್ರಕಾರ ಮೂರನೇ ತ್ರೈಮಾಸಿಕದಲ್ಲಿ ಅನುತ್ಪಾದಕ ಆಸ್ತಿಗಳ ಪ್ರಮಾಣ ಸುಮಾರು ಅರ್ಧದಷ್ಟು ಕಡಿಮೆಯಾಗಿ 1,586 ಕೋಟಿ ರೂ.ಗೆ ತಲುಪಿದೆ. ಒಟ್ಟು ಅನುತ್ಪಾದಕ ಆಸ್ತಿಗಳ ಅನುಪಾತವು 3.14 ಪ್ರತಿಶತಕ್ಕೆ ಇಳಿದಿದೆ. ಇದು ಹಿಂದಿನ ವರ್ಷದ ಇದೇ ಅವಧಿಯಲ್ಲಿ 4.50 ಪ್ರತಿಶತದಷ್ಟಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!