ಡಾಟಾ ಎಂಟ್ರಿ ಕೆಲಸ ಎಂದು ಹೇಳಿ ವಂಚನೆ: ಕಾಂಬೋಡಿಯಾದಲ್ಲಿ ಸಿಲುಕಿದ್ದಾರೆ 5,000 ಭಾರತೀಯರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಡಾಟಾ ಎಂಟ್ರಿ ಉದ್ಯೋಗದ ಆಸೆಗಾಗಿ ಕಾಂಬೋಡಿಯಾಗೆ ತೆರಳಿದ್ದ ಭಾರತೀಯರನ್ನು ಸೈಬರ್‌ ಕ್ರೈಂ ಮಾಡಲು ಬಳಸಿಕೊಳ್ಳಲಾಗಿರುವ ವಿಷಯ ಇದೀಗ ಹೊರಬಿದ್ದಿದೆ.

5,000 ಕ್ಕೂ ಹೆಚ್ಚು ಭಾರತೀಯರು ಕಾಂಬೋಡಿಯಾದಲ್ಲಿ ಸಿಲುಕಿಕೊಂಡಿದ್ದಾರೆ. ಅಲ್ಲಿ ಅವರನ್ನು ಇಚ್ಛೆಗೆ ವಿರುದ್ಧವಾಗಿ ಕೂಡಿ ಹಾಕಿ ಸೈಬರ್‌ ಕ್ರೈಂ ಮಾಡಲು ಬಳಸಿಕೊಳ್ಳಲಾಗಿದೆ. ಒಟ್ಟಾರೆ ಆರು ತಿಂಗಳಲ್ಲಿ ಭಾರತದಲ್ಲಿ ಕನಿಷ್ಠ 500 ಕೋಟಿ ರೂಪಾಯಿಗಳನ್ನು ವಂಚಿಸಿದ್ದಾರೆ ಎಂದು ಸರ್ಕಾರ ಅಂದಾಜಿಸಿದೆ.

ಡೇಟಾ ಎಂಟ್ರಿ ಜಾಬ್‌ನಲ್ಲಿ ಹೆಚ್ಚು ಸಂಬಳದ ಆಸೆ ತೋರಿಸಿ ಭಾರತೀಯರನ್ನು ಕಾಂಬೋಡಿಯಾಗೆ ಕರೆಸಿಕೊಳ್ಳಲಾಗುತ್ತಿದೆ. ನಂತರ ಅವರನ್ನು ಕೂಡಿಹಾಕಿ ಸೈಬರ್‌ ಕ್ರೈಮ್‌ ಮಾಡುವಂತೆ ಒತ್ತಾಯಿಸಲಾಗುತ್ತಿದೆ.

ಇಡಿ ಅಧಿಕಾರಿಗಳ ಸೋಗಿನಲ್ಲಿ ಬೆದರಿಕೆಯೊಡ್ಡಿ ಹಣ ಕೀಳುವುದು, ಜಾಲತಾಣಗಳಲ್ಲಿ ನಕಲಿ ಖಾತೆ ತೆರೆದು ಭಾರತೀಯರಿಗೆ ವಂಚಿಸಲಾಗಿದೆ. ಈ ಘಟನೆ ಸಂಬಂಧ ಭಾರತೀಯರನ್ನು ರಕ್ಷಿಸಲು ಗೃಹ ಸಚಿವಾಲಯವು ವಿದೇಶಾಂಗ ವ್ಯವಹಾರಗಳ ಸಚಿವಾಲಯ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ ಹಾಗೂ ಇನ್ನಿತರ ರಕ್ಷಣಾ ತಜ್ಞರು ಸಭೆ ನಡೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!