ಶಾಲಾ ಬಾಲಕನ ಅಪಹರಣ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಹೊಸದಿಗಂತ ವರದಿ ಕಲಬುರಗಿ:

ಶಾಲಾ ಬಾಲಕನ ಅಪಹರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಹರಣ ಮಾಡಿದ್ದ ಇಬ್ಬರು ಆರೋಪಿಗಳನ್ನು ಕಲಬುರಗಿ ವಿಶ್ವವಿದ್ಯಾಲಯ ಠಾಣೆಯ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಪಹರಣ ಮಾಡಿರುವ ಆರೋಪಿಗಳಾದ ಅರುಣ.ಭಜಂತ್ರಿ, ಲಕ್ಷ್ಮಣ ಭಜಂತ್ರಿ ಎಂಬುವ ಇಬ್ಬರನ್ನು ಬಂಧನ ಮಾಡಲಾಗಿದ್ದು,ಬಂಧಿತರಿಬ್ಬರು ಕಲಬುರಗಿ ನಗರದ ಸಂತ್ರಸವಾಡಿ ನಿವಾಸಿಗಳಾಗಿದ್ದಾರೆ.

ಜನವರಿ 4 ರಂದು ನಗರದ ಸಿದ್ದೇಶ್ವರ ಕಾಲೋನಿಯ ಸುದಶ೯ನ ಎಂಬ ಬಾಲಕ ಬೆಳಿಗ್ಗೆ ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಅಪಹರಣ ಮಾಡಲಾಗಿತ್ತು,ಅಪಹರಣ.ಮಾಡಿ ಬಾಲಕನ ತಂದೆಗೆ ಹತ್ತು ಲಕ್ಷ ರೂಪಾಯಿ ಡಿಮ್ಯಾಂಡ್ ಇಡಲಾಗಿತ್ತು.

ಪೋಲಿಸರ ಕಾಯಾ೯ಚರಣೆ ಪ್ರಾರಂಭವಾಗಿದ್ದೆ,ತಡ ಅಪಹರಣಕಾರರು ಬಾಲಕನನ್ನು ಬಿಟ್ಟು ಪರಾರಿಯಾಗಿದ್ದರು.ಕಳೆದ ರಾತ್ರಿ ಇಬ್ಬರು ಅಪಹರಕಾರರನ್ನು ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!