ಹೊಸದಿಗಂತ ವರದಿ ರಾಯಚೂರು :
ಹೊಸ ವರ್ಷಾಚರಣೆ ಸಮಯದಲ್ಲಿ ರಾಯಚೂರಿನ ಜ್ಯೋತಿ ಕಾಲೋನಿಯಲ್ಲಿನ ಖಾಸಗಿ ಪ್ರೌಢ ಶಾಲಾ ವಿದ್ಯಾರ್ಥಿಗಳ ನಡುವೆ ಮಾರಕಾಸ್ತ್ರಗಳಿಂದ ಹೊಡೆದಾಡಿದ ಘಟನೆ ಜರುಗಿದೆ.
ಸೋಮವಾರ ಬೆಳಿಗ್ಗೆ ಶಾಲೆಗೆ ಆಗಮಿಸಿದ್ದ ಶಾಲಾ ವಿದ್ಯಾರ್ಥಿಗಳು ಇನ್ನೇನು ಕ್ಯಾಲೆಂಡರ್ ವರ್ಷಾಚರಣೆ ಆಚರಿಸಬೇಕೆನ್ನುವ ಹೊತ್ತಿಗೆ ಶಾಲಾ ಕಾಂಪೌಂಡ್ ಹೊರಗಡೆ ಕ್ಷುಲ್ಲಕ ಕಾರಣಕ್ಕೆ ಹೊಡೆದಾಡಿಕೊಂಡಿರುವ ವಿದ್ಯಾರ್ಥಿಗಳು.
ಈ ಜಗಳಕ್ಕೆ ಸಂಬಂಧಿಸಿದಂತೆ 7 ನೇ ಹಾಗೂ 9 ನೇ ತರಗತಿ ವಿದ್ಯಾರ್ಥಿಗಳಿಬ್ಬರನ್ನೂ ವಶಕ್ಕೆ ಪಡೆದು ಘಟನೆ ಕುರಿತು ಮಾಹಿತಿ ಪಡೆಯುತ್ತಿರುವ ಪೊಲೀಸರು.
9 ನೇ ತರಗತಿ ವಿದ್ಯಾರ್ಥಿಗೆ ಸಣ್ಣಪುಟ್ಟ ಗಾಯ. ಉಳಿದ ವಿದ್ಯಾರ್ಥಿಗಳು ಸ್ಥಳದಿಂದ ನಾಪತ್ತೆಯಾಗಿದ್ದಾರೆ.
ಶಾಲೆಗೆ ಆಗಮಿಸಿದ್ದ ವಿದ್ಯಾರ್ಥಿಗಳ ಕೈಯಲ್ಲಿ ಗನ್, ಚಾಕು, ಪಂಚ್ ಮತ್ತಿತರ ಮಾರಕಾಸ್ತ್ರಗಳನ್ನು ತೆಗೆದುಕೊಂಡು ಹೊಡೆದಾಡಿದ್ದಾರೆ. ಇದರಲ್ಲಿ ಓರ್ವ ವಿದ್ಯಾರ್ಥಿಗೆ ಚಾಕು ತಗುಲಿದೆ. ಆದರೆ ಗಂಭೀರವಾದ ಗಾಯವಾಗಿಲ್ಲ.
ಮಕ್ಕಳ ಗಲಾಟೆಯಿಂದ ಆತಂಕಗೊಂಡಿರುವ ಪೋಷಕರು. ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿಯಿಂದ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು. ಶಾಲೆಯ ಬಳಿ
ನಗರದ ಪಶ್ಚಿಮ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದಾರೆ.