ಶಿವಮೊಗ್ಗದಲ್ಲಿ ಇಂದಿನಿಂದ ಶಾಲಾ-ಕಾಲೇಜು ಪುನಾರಂಭ: ಮತ್ತೆ ಹಿಜಾಬ್‌ ಧರಿಸಿ ಬಂದ ವಿದ್ಯಾರ್ಥಿನಿಯರು!

ಹೊಸದಿಗಂತ ವರದಿ, ಶಿವಮೊಗ್ಗ:

ಹಿಜಾಬ್ ಹಾಗೂ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆಯಿಂದ ಉಂಟಾಗಿದ್ದ ಸಂಘರ್ಷದಿಂದಾಗಿ ನಗರದಲ್ಲಿ ಎರಡು ವಾರಗಳಿಂದ ರಜೆ ಘೋಷಿಸಲಾಗಿದ್ದ ಶಾಲಾ ಕಾಲೇಜುಗಳು ಸೋಮವಾರ ಪುನರಾರಂಭಗೊಂಡಿವೆ.
ಹೈಕೋರ್ಟ್ ಮಧ್ಯಂತರ ಆದೇಶದ ನಡುವೆಯೂ ನಗರದ ಕಾಲೇಜುಗಳಲ್ಲಿ ಹಿಜಾಬ್ ವಿವಾದ ಹೊಗೆಯಾಡುತ್ತಲೇ ಇದ್ದು, ಸೋಮವಾರ ಕೂಡ ನಗರದ ಡಿವಿಎಸ್ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರು ಹಿಜಾಬ್ ತೆಗೆಯಲು ನಿರಾಕರಿಸಿದ್ದಾರೆ. ಇದರಿಂದಾಗಿ ಅಂತಹ ವಿದ್ಯಾರ್ಥಿನಿಯರನ್ನು ತರಗತಿ ಒಳಗೆ‌ ಹೋಗಲು ಬಿಟ್ಟಿಲ್ಲ. ಹೈಕೋರ್ಟ್ ಆದೇಶ ಇರುವುದರಿಂದ ಅದನ್ನು ಪಾಲನೆ ಮಾಡುವಂತೆ ಉಪನ್ಯಾಸಕರು ಮನವಿ ಮಾಡಿದ್ದರೂ ಕೂಡ ತೆಗೆಯಲು ನಿರಾಕರಿಸಿದ್ದಾರೆ. ಪಿಯುಸಿ ಪ್ರಾಕ್ಟಿಕಲ್ ಪರೀಕ್ಷೆ ಇದ್ದರೂ ಕೂಡ ಅದನ್ನು ಪರಿಗಣಿಸದೆ ಕೆಲ ವಿದ್ಯಾರ್ಥಿನಿಯರು ಪೋಷಕರೊಂದಿಗೆ ಮನೆಗೆ ತೆರಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!