ಯುರೋಪ್‌ ಗೆ ತನ್ನೆಲ್ಲ ವಿಮಾನಗಳ ಸಂಚಾರ ರದ್ದುಗೊಳಿಸಿದ ರಷ್ಯಾದ ಏರೋಫ್ಲಾಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಯುಕೆಯಿಂದ ವಿಮಾನ ಹಾರಟ ನಿಷೇಧ ಅನುಭಸಿದ ಬಳಿಕ, ಈಗ ರಷ್ಯಾದ ಏರೋಫ್ಲಾಟ್‌ ಇಂದಿನಿಂದ ಯುರೋಪ್‌ ಗೆ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಿದೆ.
ಈ ಹಿಂದೆ ಯುಕೆ ವಿಮಾನಯಾನ ಪ್ರಾಧಿಕಾರ ಸರ್ಕಾರದ ಮುಂದಿನ ಆದೇಶದವರೆಗೆ ಏರೋಫ್ಲಾಟ್‌ ಅನ್ನು ಅಮಾನತುಗೊಳಿಸಿತ್ತು. ಇದರ ಬೆನ್ನಲ್ಲೇ ರಷ್ಯಾ ಸಂಸ್ಥೆಯಾದ ಏರೋಫ್ಲಾಟ್‌ ಕೂಡ ಯುರೋಪ್‌ ಗೆ ತನ್ನ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿದ ಯುರೋಪ್‌ ವಿದೇಶಾಂಗ ನೀತಿ ಮುಖ್ಯಸ್ಥ ಜೋಸೆಫ್‌ ಬೊರೆಲ್‌, ರಷ್ಯಾ ವಿಮಾನಗಳ ಸಂಚಾರಕ್ಕೆ ತನ್ನ ವಾಯು ಪ್ರದೇಶವನ್ನು ಮುಚ್ಚಲು ಯುರೋಪಿಯನ್‌ ಯೂನಿಯನ್‌ ನಿರ್ಧರಿಸಿದೆ.
ಉಕ್ರೇನ್‌ ಮೇಲಿನ ದಾಳಿ ಖಂಡಿಸಿ, ಜಾಗತಿಕ  ಸಮುದಾಯಗಳು ರಷ್ಯಾ ಮೇಲೆ ಆಕ್ರೋಶ ವ್ಯಕ್ತಪಡಿಸಿದೆ. ಯುಕೆ ಮಾತ್ರವಲ್ಲದೆ ಕೆನಡಾ, ಬೆಲ್ಜಿಯಂ ಸೇರಿದಂತೆ ಹಲವು ರಾಷ್ಟ್ರಗಳು ರಷ್ಯಾಕ್ಕೆ ವಿಮಾನಗಳ ಸಂಚಾರವನ್ನು ನಿಷೇಧಿಸಿದೆ.
ಬಲ್ಗೇರಿಯಾ, ಪೋಲೆಂಡ್, ಜೆಕ್ ಗಣರಾಜ್ಯ, ಈಸ್ಟೊನಿಯ, ಲಾಟ್ವಿಯಾ, ಲಿಥುವೇನಿಯಾ, ಜೆರ್ಮನಿ, ಸ್ಲೋವೇನಿಯಾ, ಫಿನ್‌ಲ್ಯಾಂಡ್ ಮತ್ತು ಡೆನ್ಮಾರ್ಕ್‌ ದೇಶಗಳು ಕೂಡ ರಷ್ಯಾ ವಿಮಾನಗಳಿಗೆ ತಡೆ ಹಾಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!