ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಮಹಾತ್ವಾಕಾಂಕ್ಷೆಯ ಚಂದ್ರಯಾನ 3 ಗಗನೌಕೆ ಇಂದು ಉಡಾವಣೆಯಾಗಿದ್ದು, ಇಸ್ರೋ ಕಚೇರಿಯಲ್ಲಿ ಸಂಭ್ರಮ ಮನೆ ಮಾಡಿದೆ.
ಇಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಲಾಂಚ್ ವೆಹಿಕಲ್ ಮಾರ್ಕ್-111ರ ಮೂಲಕ ಚಂದ್ರಯಾನ 3ರ ಉಮಗ್ರಹವನ್ನು ಹೊತ್ತ ಎಲ್‌ಎಂವಿ-3ತ ರಾಕೆಟ್ ಅನ್ನು ಲಾಂಚ್ ಮಾಡಲಾಯಿತು. ಯಶಸ್ವಿಯಾಗಿ ಮೂರು ಹಂತಗಳನ್ನು ದಾಟಿದ ಬಳಿಕ ಇಸ್ರೋ ಕಚೇರಿಯಲ್ಲಿ ಸಂಭ್ರಮಾಚರಣೆ ಮಾಡಲಾಗಿತ್ತು. ಆ ಸುಂದರ ಕ್ಷಣಗಳ ತುಣುಕುಗಳು ಇಲ್ಲಿವೆ.
ಚಂದ್ರಯಾನ 3 ಉಡಾವಣೆ ಬಳಿಕ ಈ ಯಶಸ್ವಿಗೆ ಕಾರಣರಾದ ಎಲ್ಲರಿಗೂ ಸತೀಶ್ ಧವನ್ ಕೇಂದ್ರದಲ್ಲಿ ಇಸ್ರೋ ಅಧ್ಯಕ್ಷ ಸೋಮನಾಥ್ ಧನ್ಯವಾದ ತಿಳಿಸಿದರು. ಬಳಿಕ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮಿಷನ್ ಚಂದ್ರಯಾನ 3 ಕುರಿತು ಮಾತನಾಡಿದರು.
#WATCH | #Chandrayaan3 project director P Veeramuthuvel and ISRO chief S Somanath share their delight after the LVM3 M4 vehicle successfully launched it into orbit.
"Chandrayaan-3, in its precise orbit, has begun its journey to the Moon. Health of the Spacecraft is normal," says… pic.twitter.com/nL52Ue5e7D
— ANI (@ANI) July 14, 2023