ಚಂದಿರನ ಅಂಗಣದಲ್ಲಿ ಪತ್ತೆಯಾಯ್ತು ನೀರಿನ ಅಂಶ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಚಂದ್ರನಲ್ಲಿ ನೀರಿರುವ ಅಂಶವನ್ನು ಚೀನೀ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಚಂದ್ರನ ಪರಿಶೋಧನೆಗೆ ತೆರಳಿದ್ದ “ಓಷನ್ ಆಫ್ ಸ್ಟಾರ್ಮ್ಸ್” ವ್ಯೂಮ ನೌಕೆಯು ಚಂದ್ರನ ಅಂಗಣದಲ್ಲಿ ಸಂಗ್ರಹಿಸಿದ ಘನೀಕೃತ ಲಾವಾದ ಅವಶೇಷಗಳಲ್ಲಿ ನೀರಿನ ಅಂಶ ಪತ್ತೆಯಾಗಿದೆ ಎಂದು ವಿಜ್ಞಾನಿಗಳು ಘೋಷಿಸಿದ್ದಾರೆ.
ಹೈಡ್ರಾಕ್ಸಿಲ್ ರೂಪದಲ್ಲಿ ನೀರಿನ ಅಂಶ ಪತ್ತೆಯಾಗಿದೆ ಎಂದು ವಿಜಾನಿಗಳು ಹೇಳಿದ್ದಾರೆ. ಚಂದ್ರನ ಸಂಶೋಧನೆಯಲ್ಲಿ ಇದೊಂದು ಮಹತ್ವದ ಶೋಧನೆಯಾಗಲಿದೆ ಎಂದು ಹೇಳಿದ್ದಾರೆ. ನೀರಿನಲ್ಲಿ ಎರಡು ಹೈಡ್ರೋಜನ್ ಪರಮಾಣುವಿನೊಂದಿಗೆ ಒಂದು ಆಮ್ಲಜನಕದ ಪರಮಾಣು ಇರುತ್ತದೆ. ಚಂದ್ರನ ಮೇಲ್ಮೈಯಲ್ಲಿ ಸೂರ್ಯನ ಪ್ರಖರ ಕಿರಣಗಳು ಸ್ಪರ್ಶಿಸಿದಾಗ ಜರುಗುವ ರಾಸಾಯನಿಕ ಕ್ರಿಯೆಗಳ ಪರಿಣಾಮವಾಗಿ ಚಂದ್ರನ ಮೇಲೆ ನೀರಿನ ಸೆಲೆಯಿದೆ ಎಂದು ನಂಬಲಾಗಿದೆ.
ಪೌರಾಣಿಕ ಚೀನೀ ದೇವತೆ ʼಚಂದ್ರನʼ ಹೆಸರನ್ನು ಹೊತ್ತಿರುವ ಚೀನಾದ ಚಾಂಗ್-5 ಮಿಷನ್ ನಡಿ ನಭಕ್ಕೆ ಹಾರಿದ್ದ “ಓಷನ್ ಆಫ್ ಸ್ಟಾರ್ಮ್ಸ್” ಚಂದ್ರನ ಅಂಗಣದಿಂದ ಮಣ್ಣು ಮತ್ತು ಬಂಡೆಯ ಮಾದರಿಯನ್ನು ಡಿಸೆಂಬರ್ 2020 ರಲ್ಲಿ ಹೊತ್ತುತಂದಿತ್ತು.
ಚಂದ್ರನ ಮೇಲೆ ನೀರಿನ ಉಪಸ್ಥಿತಿಯು ಸೌರವ್ಯೂಹದ ವಿಕಾಸದ ಮೇಲೆ ಹೆಚ್ಚು ಬೆಳಕು ಚೆಲ್ಲಲಿದೆ ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!