ಹೊಸದಿಗಂತ ವರದಿ,ಮದ್ದೂರು:
ರಸ್ತೆ ಬದಿ ನಿಂತಿದ್ದ ಟಿಪ್ಪರ್ ಲಾರಿಗೆ ಸ್ಕೂಟರ್ ಡಿಕ್ಕಿ ಹೊಡೆದು ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟುಘಿ, ಹಿಂಬದಿ ಸವಾರ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ನಿಡಘಟ್ಟ ಸಮೀಪ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಶನಿವಾರ ಸಂಜೆ ಜರುಗಿದೆ.
ಬೆಂಗಳೂರಿನ ಯಲಹಂಕದ ರೇವಾ ಯೂನಿರ್ವಸಿಟಿ ಕಾಲೇಜಿನ ವಿದ್ಯಾರ್ಥಿ ಬೈಬಾಜ್ಶಾ (21) ಮೃತಪಟ್ಟ ವಿದ್ಯಾರ್ಥಿ. ಸ್ಕೂಟರ್ ಹಿಂದೆ ಕುಳಿತು ಪ್ರಯಾಣಿಸುತ್ತಿದ್ದ ಬೆಂಗಳೂರು ಆರ್.ಟಿ. ನಗರ ನಿವಾಸಿ ವಿಜಯ್ ಪಹಾರಿ (23) ತೀವ್ರವಾಗಿ ಗಾಯಗೊಂಡಿದ್ದುಘಿ, ಈತನನ್ನು ಮದ್ದೂರು, ಮಂಡ್ಯ ಆಸ್ಪತ್ರೆಗಳ ಚಿಕಿತ್ಸೆ ನಂತರ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದುಘಿ, ಪರಿಸ್ಥಿತಿ ಗಂಭೀರವಾಗಿದೆ.
ಬೈಬಾಜ್ಶಾ ಹಾಗೂ ವಿಜಯ್ಪಹಾರಿ ಪಶ್ಚಿಮ ಬಂಗಳಾದ ಜುಹಾರಿಪುರದ ಮೂಲದವರಾಗಿದ್ದುಘಿ, ಇಬ್ಬರೂ ಬೆಂಗಳೂರಿನ ರೇವಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಬೈಬಾಜ್ಶಾ ತನ್ನ ಪ್ರೇಯಸಿಯೊಂದಿಗೆ ೆಟೋ ಶೂಟ್ ಮಾಡಲು ತಮ್ಮ ಆ್ಯಕ್ಟೀವ್ ಹೋಂಡಾದಲ್ಲಿ ವಿಜಯ್ ಪಹಾರಿ ಜೊತೆ ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದರು.
ನಿಡಘಟ್ಟ ಸಮೀಪದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರಸ್ತೆ ಬದಿ ನಿಂತಿದ್ದ ಟಿಪ್ಪರ್ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಸುದ್ಧಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಸಂಚಾರಿ ಠಾಣೆ ಪಿಎಸ್ಐ ಸಿದ್ದರಾಜು ಹಾಗೂ ಸಿಬ್ಬಂದಿಗಳು ಟಿಪ್ಪರ್ ಲಾರಿಗೆ ಕಚ್ಚಿಕೊಂಡಿದ್ದ ದೇಹಗಳನ್ನು ಹೊರ ತೆಗೆದು ಆಸ್ಪತ್ರೆಗೆ ಸಾಗಿಸಿದರು. ಇನ್ಸ್ಪೆಕ್ಟರ್ ಸಂತೋಷ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.