October 12, 2026
Monday, October 12, 2026
spot_img

ಕಳ್ಳತನದ ಭಯಕ್ಕೆ ಮನೆ ಮೇಲ್ಛಾವಣಿಗೇರಿದ ಸ್ಕಾರ್ಪಿಯೋ: ಮಾಲೀಕನ ‘ಸೆಕ್ಯೂರಿಟಿ ಪ್ಲ್ಯಾನ್’ ಕಂಡು ನೆಟ್ಟಿಗರು ಶಾಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾಮೂಲಾಗಿ ಕಾರ್ ಅನ್ನು ಎಲ್ಲಿ ಪಾರ್ಕ್ ಮಾಡ್ತೀವಿ ಹೇಳಿ? ಮನೆ ಮುಂದೆ, ಅಥವಾ ಪಾರ್ಕಿಂಗ್ ಮಾಡೋ ಸ್ಥಳದಲ್ಲಿ ಅಲ್ವಾ? ಆದ್ರೆ ಇಲ್ಲೊಬ್ರು ವಿದೇಶಕ್ಕೆ ಹೊರಟಿದ್ದು, ಅವರ ನೆಚ್ಚಿನ ಕಾರ್ ಅನ್ನು ರಕ್ಷಿಸಿಕೊಳ್ಳೋದಕ್ಕೆ ಮಹಾ ಪ್ಲಾನ್ ಒಂದು ಮಾಡ್ಕೊಂಡಿದ್ದಾರೆ.

ಅವರ ಏರಿಯಾದಲ್ಲಿ ಕಳ್ಳರ ಕಾಟ ಜಾಸ್ತಿಯಾಗಿದ್ಯಂತೆ ಅದಿಕ್ಕಾಗಿ ತಮ್ಮ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್‌ ಕಾರನ್ನು ರಕ್ಷಿಸಿಕೊಳ್ಳೋದಕ್ಕೆ ಕ್ರೇನ್ ಮೂಲಕ ಮನೆಯ ಮೇಲ್ಛಾವಣಿಗೆ ಏರಿಸಿ ಪಾರ್ಕ್ ಮಾಡಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗಿರೋ ಬಿಹಾರದ ಈ ವಿಡಿಯೋದಲ್ಲಿ, ಭಾರೀ ಗಾತ್ರದ ಸ್ಕಾರ್ಪಿಯೋ ಕಾರನ್ನು ಕ್ರೇನ್ ಮೂಲಕ ನಿಧಾನವಾಗಿ ಮೇಲಕ್ಕೆತ್ತಿ ಮನೆಯ ಮೇಲ್ಛಾವಣಿಯಲ್ಲಿ ಇರಿಸುವ ದೃಶ್ಯ ಕಂಡುಬಂದಿದೆ. ವಿದೇಶಕ್ಕೆ ಕೆಲಸದ ನಿಮಿತ್ತ ತೆರಳಲು ಸಿದ್ಧರಾಗಿದ್ದ ಮಾಲೀಕರು, ತಾವು ಇಲ್ಲದ ಸಮಯದಲ್ಲಿ ಕಾರನ್ನು ನೆಲಮಟ್ಟದಲ್ಲಿ ನಿಲ್ಲಿಸಿದರೆ ಕಳ್ಳತನವಾಗಬಹುದು ಎಂಬ ಆತಂಕದಿಂದ ಈ ಅಸಾಮಾನ್ಯ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ನೆಟ್ಟಿಗರು ಏನಂದ್ರು?

ಕಾರ್ ಪಾರ್ಕಿಂಗ್ ವಿಡಿಯೋ ನೋಡಿರೋ ನೆಟ್ಟಿಗರು ನಿಬ್ಬೆರಗಾಗಿದ್ದಾರೆ. ಈ ರೀತಿನೂ ಕಾರ್ ಪಾರ್ಕಿಂಗ್ ಮಾಡಬಹುದಾ ಅನ್ನೋ ಪ್ರಶ್ನೆ ಕೇಳಿದ್ದಾರೆ.ಇನ್ನೂ ಕೆಲವ್ರು ಮಾಲೀಕನ ‘ವಾಹನ ಸುರಕ್ಷತಾ ಪ್ಲ್ಯಾನ್‌’ಗೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಮತ್ತೊಬ್ಬರು ಇದು ತುಂಬಾ ಡೇಂಜರಸ್ ಪ್ರಯತ್ನ ಎಂದಿದ್ದಾರೆ.

ಒಟ್ಟಾರೆ, ವಿದೇಶಕ್ಕೆ ಹೊರಟ ವ್ಯಕ್ತಿಯ ಈ ಕಾರ್ ಪಾರ್ಕಿಂಗ್ ತಂತ್ರ ನೋಡುಗರಲ್ಲಿ ಅಚ್ಚರಿ ಮೂಡಿಸಿದ್ದು, ಮನೆಯ ಮೇಲ್ಛಾವಣಿ ವಾಹನದ ಭಾರವನ್ನು ತಡೆದುಕೊಳ್ಳುವ ಸಾಮರ್ಥ್ಯ ಇದೆಯೋ ಇಲ್ಲವೋ ಎನ್ನೋದನ್ನು ಮುಂದೆ ಸಮಯವೇ ತೀರ್ಮಾನಿಸಲಿದೆ ಏನಂತೀರಾ?

Must Read