Friday, September 22, 2023

Latest Posts

ಭಾರತಕ್ಕೆ ಎಂಟ್ರಿ ಕೊಟ್ಟ ಸ್ಕ್ರಬ್ ಟೈಫಸ್: ಮಾರಕ ಸೋಂಕಿಗೆ 14 ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾರಣಾಂತಿಕ ಸೋಂಕು ಸ್ಕ್ರಬ್ ಟೈಫಸ್ ಭಾರತಕ್ಕೆ ಎಂಟ್ರಿ ಕೊಟ್ಟಿದೆ. ಹಿಮಾಚಲ ಪ್ರದೇಶ, ಶಿಮ್ಲಾ ಭಾಗದಲ್ಲಿ ತೀವ್ರವಾಗಿ ಸೋಂಕು ಹರಡುತ್ತಿದ್ದು, ಈವರೆಗೂ 14  ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಸಾಂಕ್ರಾಮಿಕ ರೋಗವಾದ ಸ್ಕ್ರಬ್ ಟೈಫಸ್ ಬ್ಯಾಕ್ಟೀರಿಯಾ ಸೋಂಕಾಗಿದೆ. ಸೋಂಕಿತ ಹುಳಗಳ ಕಡಿತದಿಂದ ಈ ಸೋಂಕು ಮಾನವನ ದೇಹ ಸೇರುತ್ತದೆ.

ಹಿಮಾಚಲ ಪ್ರದೇಶದಲ್ಲಿ ಐವರು ಹಾಗೂ ಶಿಮ್ಲಾದಲ್ಲಿ ಒಂಬತ್ತು ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಒಡಿಶಾದ ಬರ್ಗಢ್ ಮುಖ್ಯ ಜಿಲ್ಲಾ ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯ ಅಧಿಕಾರಿ ಸಾಧು ಚರಣ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈಗಾಗಲೇ ಐದು ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ, ಇನ್ನೂ ನಾಲ್ವರಲ್ಲಿ ಸೋಂಕು ಕಾಣಿಸಿದೆ ಎಂದಿದ್ದಾರೆ. ಶಿಮ್ಲಾದಲ್ಲಿ ಒಟ್ಟಾರೆ ೨೯೫ ಮಂದಿಗೆ ಸೋಂಕು ತಗುಲಿದೆ.

ಸ್ಕ್ರಬ್ ಟೈಫಸ್ ರೋಗ ಲಕ್ಷಣಗಳೇನು?
ಹುಳ ಕಚ್ಚಿದ ಹತ್ತು ದಿನಗಳಲ್ಲಿ ಜ್ವರ ಹಾಗೂ ವಿಪರೀತ ಚಳಿ
ತಲೆನೋವು ಹಾಗೂ ಸ್ನಾಯು ಸೆಳೆತ
ಹುಳು ಕಚ್ಚಿದ ಜಾಗದಲ್ಲಿ ಕೆಂಪು ರಿಂಗ್ ಮೂಡುವುದು
ರಕ್ತಸ್ರಾವ, ಅಂಗಾಗ ವೈಫಲ್ಯ, ಕೋಮಾ ಸಾಧ್ಯತೆಯೂ ಇದೆ.

ರಕ್ಷಿಸಿಕೊಳ್ಳುವುದು ಹೇಗೆ?
ಈ ಸೋಂಕಿಗೆ ಲಸಿಕೆ ಇಲ್ಲ, ಆದರೆ ಸೋಂಕಿತ ಹುಳುಗಳ ಸಂಪರ್ಕವನ್ನು ತಪ್ಪಿಸುವ ಮೂಲಕ ಅಪಾಯ ಕಡಿಮೆ ಮಾಡಿಕೊಳ್ಳಬಹುದು. ರೋಗ ಇರುವ ಪ್ರದೇಶಗಳಿಗೆ ತೆರಳಬೇಡಿ. ದಟ್ಟ ಕಾಡು, ಗಿಡ, ಪೊದೆ ಇರುವ ಪ್ರದೇಶಗಳಿಂದ ದೂರವಿರಿ.
ಮಕ್ಕಳನ್ನು ಹೊರಗೆ ಕರೆದುಕೊಂಡು ಹೋದರೆ ಮೈತುಂಬಾ ಬಟ್ಟೆ ಹಾಕಿ. ಮನೆಯಲ್ಲಿ ಶುಚಿತ್ವ ಕಾಪಾಡಿ, ಪ್ರಾಣಿಗಳಿಂದ ದೂರ ಇಡಿ. ಸಾಕುಪ್ರಾಣಿಗಳ ಚರ್ಮದ ಬಗ್ಗೆ ಗಮನ ಇರಲಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!