ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂತರಾಷ್ಟ್ರೀಯ ಸಮುದ್ರ ಗಡಿ ರೇಖೆಯನ್ನು ದಾಟಿ ಅತಿಕ್ರಮಣ ಮಾಡಿದ ಆರೋಪದ ಮೇಲೆ ತಮಿಳುನಾಡಿನ ಪುದುಕ್ಕೊಟ್ಟೈ ಮೂಲದ ಒಂಬತ್ತು ಮೀನುಗಾರರನ್ನು ಶ್ರೀಲಂಕಾ ನೌಕಾಪಡೆಯು ಬಂಧಿಸಿದೆ.
ಪುದುಕೊಟ್ಟೈ ಜಿಲ್ಲೆಯ ಕೊಟ್ಟೈಪಟ್ಟಿನಂ ಮತ್ತು ಜಗದಿಪಟ್ಟಣಂನಿಂದ ಎರಡು ಯಾಂತ್ರೀಕೃತ ದೋಣಿಗಳಲ್ಲಿ ಮೀನುಗಾರರು ಸಮುದ್ರಕ್ಕೆ ತೆರಳಿದ್ದ ವೇಳೆ ಬುಧವಾರ ರಾತ್ರಿ ಈ ಘಟನೆ ನಡೆದಿದೆ.
ನಾಲ್ವರು ಮೀನುಗಾರರಾದ ಎನ್.ಅರುಣ್ (35), ಜಿ.ಮರುದು (42), ಕೆ.ಸುಂದರಂ (35) ಮತ್ತು ಎಸ್.ಸೆಲ್ವರಾಜ್ (38) ಅವರು ಕೊಟ್ಟೈಪಟ್ಟಿಣಂನಿಂದ ಯಾಂತ್ರೀಕೃತ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು ಎಂದು ಕರಾವಳಿ ಭದ್ರತಾ ಗುಂಪು (ಸಿಎಸ್‌ಜಿ) ಮಾಹಿತಿ ನೀಡಿದ್ದಾರೆ. ನೀಂದಂತೀವು ನಲ್ಲಿ ಮೀನುಗಾರರನ್ನು ಸೆರೆ ಹಿಡಿದ ಶ್ರೀಲಂಕಾದ ನೌಕಾಪಡೆಯು ವಿಚಾರಣೆಗಾಗಿ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.
ಅದಾಗ್ಯೂ ಆರ್.ಕೇಶವನ್ (35), ಆರ್.ಕುಮಾರ್ (38), ಆರ್.ಗುಣ (20), ಮುರುಗೇಶನ್ (45) ಮತ್ತು ಕೆ.ಮುತ್ತು (43) ಎಂಬ ಐವರು ಮೀನುಗಾರರ ತಂಡವೊಂದು ಮೀನುಗಾರಿಕೆಗೆ ತೆರಳಿದ್ದರು.
ಅವರನ್ನು ಸಹ ಶ್ರೀಲಂಕಾ ನೌಕಾಪಡೆಯು ನೀಂದಂತೀವುನಿಂದ ವಶಕ್ಕೆ ತೆಗೆದುಕೊಂಡು ವಿಚಾರಣೆಗಾಗಿ ಕಂಕಸಂತುರೈ ನೌಕಾನೆಲೆಗೆ ಕರೆದೊಯ್ದಿದೆ.
ಶ್ರೀಲಂಕಾದ ಸಮುದ್ರಕ್ಕೆ ಅತಿಕ್ರಮಣವಾಗಿ ಪ್ರವೇಶಿಸಿದ ಆರೋಪದ ಮೇಲೆ ಈವರೆಗೆ ಹಲವಾರು ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ.