ಮೀನಿನಂತೆ ವೇಗವಾಗಿ ಸ್ಕೂಬಾ ಡೈವಿಂಗ್ ಮಾಡಿ, 600 ಕೆ.ಜಿ ಪ್ಲಾಸ್ಟಿಕ್‌ ಕಸ ಹೊರತೆಗೆದಿದ್ದಾಳೆ ಈ 8ರ ಪೋರಿ!

ಮೇಘನಾ ಶೆಟ್ಟಿ, ಶಿವಮೊಗ್ಗ

”ಡೈವಿಂಗ್ ಮಾಡಬೇಕು ಅಂದ್ರೆ ಉಸಿರು ಬಿಗಿ ಹಿಡಿಯೋದನ್ನು ಮೊದಲು ನಿಲ್ಲಿಸಬೇಕು”’ ಇದು ಮೊದಲ ಪಾಠ ಅಂತಾಳೆ ಎಂಟು ವರ್ಷದ ‘ತಾರಾಗೈ ಆರಥನಾ’

ಚೆನ್ನೈನ ಕರಪ್ಪಕ್ಕಮ್‌ನ ಪುಟಾಣಿ ತಾರಾಗೈ, ಸ್ಕೂಬಾ ಡೈವಿಂಗ್ ಮಾಡುತ್ತಾಳೆ. ಬರೀ ಸ್ಕೂಬಾ ಡ್ರೈವಿಂಗ್ ಟ್ರೈ ಮಾಡೋದಲ್ಲ, ಇದರಲ್ಲಿ ಅವಳು ಪಂಟ್ರು ಅಂತಾನೇ ಹೇಳಬಹುದು.

ಎಕ್ಸ್‌ಪರ್ಟ್ ಯಾಕಾಗಬಾರದು ಹೇಳಿ? ಐದು ವರ್ಷದವಳಿಂದ ತಾರಾಗೈ ಸ್ಕೂಬಾ ಡೈವಿಂಗ್ ಮಾಡುತ್ತಿದ್ದಾಳೆ. ಅವಳ ತಂದೆ ಅರವಿಂದ್ ತರುಣ್‌ಶ್ರೀ ಸ್ಕೂಬಾ ಡೈವಿಂಗ್ ಇನ್ಸ್‌ಟ್ರಕ್ಟರ್. ಮಕ್ಕಳನ್ನ ಪೂಲ್‌ನಲ್ಲಿ ಸ್ವಿಮ್ಮಿಂಗ್ ಮಾಡೋಕೆ ಬಿಡೋಕೂ ಈಗಿನ ನಾಜೂಕು ಪೋಷಕರು ಭಯ ಪಡ್ತಾರೆ, ಎಲ್ಲಿ ಮಕ್ಕಳಿಗೆ ಏನಾಗುತ್ತದೋ ಎಂದು ಹೆದರುತ್ತಾರೆ. ಆದರೆ ಅರವಿಂದ್, ತಾರಾಗೈ ಐದು ವರ್ಷದವಳಿದ್ದಾಗಿಂದಲೂ ಅವಳಿಗೆ ಸ್ಕೂಬಾ ಡೈವಿಂಗ್ ಬಗ್ಗೆ ಹೇಳಿ ಹುಚ್ಚು ಹಿಡಿಸಿದ್ದಾರೆ.

Thaaragai Arathana600 ಕೆ.ಜಿಗೂ ಹೆಚ್ಚು ಪ್ಲಾಸ್ಟಿಕ್:

ನೀರು ಅಂದರೆ ಸಿಕ್ಕಾಪಟ್ಟೆ ಇಷ್ಟ ಪಡೋ ಪುಟಾಣಿಗೆ ಸ್ಕೂಬಾ ಸುಲಭದ ತುತ್ತಾಗಿದೆ. ಈಕೆ ಬರೀ ಸ್ಕೂಬಾ ಡೈವಿಂಗ್ ಖುಷಿಗಾಗಿ ಮಾಡೋದಿಲ್ಲ, ಇವಳು ಈ ಅಭ್ಯಾಸ ರೂಢಿ ಮಾಡಿಕೊಂಡಿದ್ದು, ಸಮುದ್ರವನ್ನು ಪ್ಲಾಸ್ಟಿಕ್ ಮುಕ್ತ ಮಾಡೋದಕ್ಕೆ. ಹೌದು, ಸಮುದ್ರದಲ್ಲಿ ಅಷ್ಟೊಂದು ಪ್ಲಾಸ್ಟಿಕ್ ಇರೋದನ್ನು ಕಂಡ ತಾರಾಗೈ ಈವರೆಗೂ ಸಮುದ್ರದಿಂದ 600 ಕೆ.ಜಿಗೂ ಹೆಚ್ಚು ಪ್ಲಾಸ್ಟಿಕ್ ಸಂಗ್ರಹಿಸಿದ್ದಾಳೆ. ”ಸಮುದ್ರದ ಒಡಲು ಉಸಿರಾಡಬೇಕು, ಅದಕ್ಕೆ ಎಲ್ಲ ಪ್ಲಾಸ್ಟಿಕ್ ತೆಗಿಬೇಕು” ಎಂದು ಮುಗ್ಧವಾಗಿ ಹೇಳ್ತಾಳೆ ತಾರಾಗೈ.

Scuba Diver at 8, Girl Collects 600KG Plastic Waste to Help the Ocean Breathe10 ಸಾವಿರ ಕೆ.ಜಿ. ಪ್ಲಾಸ್ಟಿಕ್:

ಮಕ್ಕಳು ಸಮುದ್ರದ ಒಡಲನ್ನ ಹತ್ತಿರದಿಂದ ನೋಡಬೇಕು, ಸಣ್ಣ ವಯಸ್ಸಿನಿಂದಲೇ ಸ್ವಿಮ್ಮಿಂಗ್ ಅಭ್ಯಾಸ ಮಾಡಬೇಕು. ನಮ್ಮ ಎಕೋ ಸಿಸ್ಟಮ್ ಬಗ್ಗೆ ಅವರು ತಿಳಿಯಬೇಕು. ಮಗಳು ಐದು ವರ್ಷದಿಂದ ಸ್ವಿಮ್ಮಿಂಗ್ ಮಾಡುತ್ತಾ, ಈಗ ಸಮುದ್ರದ ಬಗ್ಗೆ ಕಾಳಜಿ ತೋರಿಸ್ತಾಳೆ. ಎಕೋ ಸಿಸ್ಟಮ್ ಕಾಪಾಡುವುದು ಮುಖ್ಯ ಅಂತ ಬೇರೆಯವರಿಗೂ ಹೇಳುತ್ತಾಳೆ ಅಂತಾರೆ ಅರವಿಂದ್. ಅರವಿಂದ್ ಕೂಡ 17 ವರ್ಷದಿಂದ ಸ್ಕೂಬಾ ಡೈವಿಂಗ್ ಮಾಡ್ತಿದ್ದಾರೆ. ಇವರು ಕೂಡ ಸಮುದ್ರದಿಂದ ಈಗಾಗಲೇ 10 ಸಾವಿರ ಕೆ.ಜಿ. ಪ್ಲಾಸ್ಟಿಕ್ ವೇಸ್ಟ್ ಹೊರತೆಗೆದಿದ್ದಾರೆ.

இளம் சூழலியாளர்: கடலைக் காக்கும் தாரகை! | Young Ecologist: Marine Protector! - hindutamil.inಗುಜರಿ ಅಂಗಡಿಗೆ ಪ್ಲಾಸ್ಟಿಕ್:

ಈ ಪ್ಲಾಸ್ಟಿಕ್ ಕಸವನ್ನು ಗುಜರಿ ಅಂಗಡಿಗೆ ನೀಡ್ತೇವೆ. ಅಂಗಡಿಗಳು ಅದನ್ನು ರೀಸೈಕಲ್ ಮಾಡುತ್ತವೆ. ಇದರಿಂದ ಬಂದ ಹಣವನ್ನು ತಮಿಳುನಾಡಿನ ಪರಿಸರ ಇಲಾಖೆಗೆ ಕೊಡ್ತೀನಿ ಅಂತಿದ್ದಾಳೆ ತಾರಾಗೈ ಎಂದು ಹೆಮ್ಮೆಯಿಂದ ಅರವಿಂದ್ ಹೇಳಿಕೊಳ್ಳುತ್ತಾರೆ.

Plastic in the environment: what you need to know ಅಲೆಗಳ ಶಬ್ದ ಮಾಮೂಲಿ ಆಗಬೇಕು:

ಮಕ್ಕಳಿಗೆ ಅಪರೂಪಕ್ಕೆ ನೀರು ಬಳಿ ಕರೆದುಕೊಂಡು ಹೋದರೆ ಅದರ ಬಗ್ಗೆ ಭಯ ಇರುತ್ತದೆ. ಸಮುದ್ರದ ಅಲೆಗಳ ಶಬ್ದ ಅವರಿಗೆ ಮಾಮೂಲಿ ಆಗಬೇಕು. ಮಗಳಿಗೆ ಒಂಬತ್ತು ತಿಂಗಳಿದ್ದಾಗ ಅವಳು ನೀರಿನಲ್ಲಿ ತೇಲುತ್ತಿದ್ದಳು. ಮೂರು ವರ್ಷದವಳಿದ್ದಾಗಲೇ ಸ್ವಿಮ್ಮಿಂಗ್ ಕಲಿತಳು. ಈಗ ಅವಳಿಗೆ ನೀರು ಎಂದರೆ ತುಂಬಾ ಇಷ್ಟ. ಮಕ್ಕಳಿಗೆ ನಾವು ಏನು ಹೇಳಿಕೊಡುತ್ತೇವೆ ಎನ್ನುವುದು ಮುಖ್ಯ. ಮಕ್ಕಳಲ್ಲಿ ಸಾಮಾಜಿಕ ಕಳಕಳಿ ಮೂಡಿಸುವ ಪ್ರಯತ್ನಕ್ಕೆ ಬೆಲೆ ಕಟ್ಟಲಾಗದು. ವರ್ಷಗಟ್ಟಲೆ ಸಮುದ್ರದ ಒಡಲನ್ನು ಶುಚಿ ಮಾಡುತ್ತಿರೋ ಈ ತಂದೆ ಮಗಳಿಗೆ ನಮ್ಮ ಸಲಾಂ!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!