ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪ್ರಸಕ್ತ ಶೈಕ್ಷಣಿಕ ವರ್ಷದ ಸ್ನಾತಕೋತ್ತರ (ಪಿಜಿ) ವೈದ್ಯಕೀಯ ಕೋರ್ಸ್‌ಗಳ ಸೀಟ್ ಮ್ಯಾಟ್ರಿಕ್ಸ್ ಮತ್ತು ಶುಲ್ಕದ ವಿವರಗಳನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ.
ಅರ್ಹ ಅಭ್ಯರ್ಥಿಗಳು ನವೆಂಬರ್ 19 ರಂದು ಮಧ್ಯಾಹ್ನ 2 ಗಂಟೆಯಿಂದ ನವೆಂಬರ್ 22 ರಂದು ಸಂಜೆ 4 ಗಂಟೆಯವರೆಗೆ ತಮ್ಮ ಆದ್ಯತೆ ಸೀಟ್ ನಮೂದಿಸಬಹುದು. ನವೆಂಬರ್ 23 ರಂದು ಸಂಜೆ 4 ಗಂಟೆಯ ನಂತರ ಅಣಕು ಸೀಟು ಹಂಚಿಕೆ ಫಲಿತಾಂಶಗಳನ್ನು ಪ್ರಕಟಿಸಲಾಗುವುದು ಮತ್ತು ಅಭ್ಯರ್ಥಿಗಳು ತಮ್ಮ ಆದ್ಯತೆಗಳನ್ನು ನವೆಂಬರ್ 23 ರಂದು ಸಂಜೆ 4 ರಿಂದ ನವೆಂಬರ್ 25 ರ ಸಂಜೆ 4 ರವರೆಗೆ ಬಗಲಾವಣೆಗೆ ಅವಕಾಶವ ಹೊಂದಿರುತ್ತಾರೆ.
ಮೊದಲ ಸುತ್ತಿನ ಅಂತಿಮ ಸೀಟು ಹಂಚಿಕೆ ಫಲಿತಾಂಶವನ್ನು ನವೆಂಬರ್ 26 ರಂದು ರಾತ್ರಿ 8 ಗಂಟೆಯ ನಂತರ ಪ್ರಕಟಿಸಲಾಗುವುದು. ಸೀಟು ಹಂಚಿಕೆಯಾದ ಅಭ್ಯರ್ಥಿಗಳು ನವೆಂಬರ್ 27 ಮತ್ತು 29 ರ ನಡುವೆ ತಮ್ಮ ಅಂತಿಮ ಆಯ್ಕೆಯನ್ನು ಆರಿಸಿಕೊಳ್ಳಬೇಕು ಮತ್ತು ಡಿಸೆಂಬರ್ 2 ರೊಳಗೆ ಅಗತ್ಯ ಶುಲ್ಕವನ್ನು ಪಾವತಿಸಬೇಕು. ಭರ್ತಿಯಾಗದ ಪದವಿಪೂರ್ವ (ಯುಜಿ) ವೈದ್ಯಕೀಯ ಸೀಟುಗಳು ಮತ್ತು ಉಳಿದ ದಂತ ವೈದ್ಯಕೀಯ ಸೀಟುಗಳಿಗೆ ಮಾರ್ಪಡಿಸುವ ಸುತ್ತು ಮಂಗಳವಾರ ಆರಂಭವಾಗಲಿದೆ. ಈ ಸುತ್ತಿನಲ್ಲಿ ಸೀಟುಗಳನ್ನು ಹಂಚಿಕೆ ಮಾಡಿದ ಅಭ್ಯರ್ಥಿಗಳು ನವೆಂಬರ್ 29 ರಂದು ಮೂಲ ದಾಖಲೆಗಳೊಂದಿಗೆ ಆಯಾ ಕಾಲೇಜುಗಳಿಗೆ ವರದಿ ಮಾಡಬೇಕು.