Tuesday, March 28, 2023

Latest Posts

ಸಿಯಾಟಲ್ – ಜಾತಿ ತಾರತಮ್ಯ ನಿಷೇಧ ಜಾರಿಗೆ ತಂದ ಮೊದಲ ಯುಎಸ್‌ ನಗರ !

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಅಮೆರಿಕದ ವಾಷಿಂಗ್ಟನ್‌ ರಾಜ್ಯದ ಸಿಯಾಟಲ್ ನಗರವು, ಜಾತಿ ತಾರತಮ್ಯವನ್ನು ಕಾನೂನುಬಾಹಿರಗೊಳಿಸಿದ ಅಮೆರಿಕದ ಮೊದಲ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸಿಯಾಟಲ್‌ ನಲ್ಲಿ ಭಾರತೀಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಭಾರತದಲ್ಲಿರುವ ಹಾಗೆ ಅಲ್ಲಿಯೂ ಜಾತಿ ಪದ್ಧತಿ ಆಚರಣೆಯಲ್ಲಿತ್ತು. ಸಿಯಾಟಲ್‌ ನಗರಸಭೆಯ ಸದಸ್ಯ, ಭಾರತೀಯ ಸಂಜಾತೆ ಕ್ಷಮಾ ಸಾವಂತ್‌ ಅವರು, ಜಾತಿ ಪದ್ಧತಿ ತೊಡೆದು ಹಾಕುವ ಮಸೂದೆ ಮಂಡಿಸಿದರು. 6–1 ಮತಗಳಿಂದ ಈ ಮಸೂದೆಗೆ ಒಪ್ಪಿಗೆ ಸಿಕ್ಕಿದೆ.

ಈ ಕ್ರಮವು ಅಲ್ಲಿನ ದಕ್ಷಿಣ ಏಷ್ಯಾದ ವಲಸೆಗಾರರಿಗೆ, ವಿಶೇಷವಾಗಿ ಭಾರತೀಯ ಮತ್ತು ಹಿಂದೂ ಸಮುದಾಯಗಳ ಜಾತಿ ವ್ಯವಸ್ಥೆಯ ಕಟ್ಟುನಿಟ್ಟಾದ ಸಾಮಾಜಿಕ ಶ್ರೇಣೀಕರಣದ ಪ್ರಮುಖವಾದ ಸಮಸ್ಯೆಯನ್ನು ಪರಿಹರಿಸುತ್ತದೆ.

‘ಈಗ ಅಧಿಕೃತ. ನಮ್ಮ ಚಳವಳಿಯೂ ಐತಿಹಾಸಿಕವಾಗಿ ಗೆಲುವು ಸಾಧಿಸಿದೆ. ದೇಶದಲ್ಲೇ ಮೊದಲ ಬಾರಿಗೆ ಸಿಯಾಟಲ್‌ನಲ್ಲಿ ಜಾತಿ ನಿರ್ಮೂಲನೆ ವಿರುದ್ಧ ಕಾನೂನು ಜಾರಿಯಾಗಿದೆ. ಈ ಚಳುವಳಿಯನ್ನು ದೇಶದಾದ್ಯಂತ ಹರಡಬೇಕಾಗಿದೆ‘ ಎಂದು ಕ್ಷಮಾ ಸಾವಂತ್‌ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!