Thursday, March 30, 2023

Latest Posts

ದೀಪಿಕಾ ದಾಸ್ ಬೆಕ್ಕು ಹುಡುಕಿಕೊಟ್ಟವರಿಗೆ 15 ಸಾವಿರ ರೂಪಾಯಿ ಬಹುಮಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ದೀಪಿಕಾ ದಾಸ್‌ಗೆ ಪ್ರಾಣಿಗಳೆಂದರೆ ಎಲ್ಲಿಲ್ಲದ ಪ್ರೀತಿ, ತಮ್ಮ ಬಳಿ ಇರುವ ಸಾಕುಬೆಕ್ಕುಗಳನ್ನು ಮಕ್ಕಳಂತೆ ನೋಡಿಕೊಂಡಿದ್ದಾರೆ. ಇದೀಗ ದೀಪಿಕಾ ದಾಸ್ ಬೆಕ್ಕು ಕಳೆದು ಹೋಗಿದೆ. ಇದನ್ನು ಹುಡುಕೋಕೆ ದೀಪಿಕಾ ಹರಸಾಸಹ ಮಾಡ್ತಿದ್ದಾರೆ.

ದೀಪಿಕಾ ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟೀವ್ ಆಗಿದ್ದಾರೆ, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬೆಕ್ಕನ್ನು ಯಾರಾದರೂ ಹುಡುಕಿ ಕೊಡಬಹುದಾ ಎನ್ನುವ ಆಸೆಯಿಂದ ಪೋಸ್ಟ್ ಮಾಡಿದ್ದಾರೆ, ಬಹುಮಾನ ಕೂಡ ಘೋಷಿಸಿದ್ದಾರೆ.

ನಮ್ಮ ಷ್ಯಾಡೋ ಕಳೆದು ಹೋಗಿದೆ, ಫೆ. ೧೮ರಿಂದ ಬೆಂಗಳೂರಿನ ಉಲ್ಲಾಳದ ವಿಶ್ವೇಶ್ವರಯ್ಯ ಲೇಔಟ್‌ನ ಮೂರನೇ ಬ್ಲಾಕ್‌ನಿಂದ ಬೆಕ್ಕು ಕಾಣೆ ಆಗಿದೆ, ಇದರ ಬಣ್ಣ ಕಪ್ಪು, ಕತ್ತಿನ ಸುತ್ತ ಕಂದು ಬಣ್ಣ ಇದೆ, ಪರ್ಷಿಯನ್ ಜಾತಿಗೆ ಸೇರಿದ ಗಂಡು ಬೆಕ್ಕು, ಇದಕ್ಕೆ ಒಂಬತ್ತು ತಿಂಗಳು. ಇದನ್ನು ಹುಡುಕಿಕೊಟ್ಟವರಿಗೆ ಬಹುಮಾನ ನೀಡುತ್ತೇವೆ ಎಂದು ದೀಪಿಕಾ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!