RESULT | ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ, ಪಾಸಾದ್ರೂ ಫೇಲಾದ್ರೂ ಲೈಫ್‌ ಇದ್ದೇ ಇದೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಂದು ಬಹುನಿರೀಕ್ಷಿತ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ.  ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ  ಬೆಳಗ್ಗೆ 10 ಗಂಟೆಗೆ ಸುದ್ದಿಗೋಷ್ಠಿ ನಡೆಯಲಿದ್ದು, ಬಳಿಕ 11 ಗಂಟೆಗೆ https://karresults.nic.in ವೆಬ್​​ಸೈಟ್​ನಲ್ಲಿ ಫಲಿತಾಂಶ ಪ್ರಕಟವಾಗಲಿದೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ 1 ಅನ್ನು ಮಾರ್ಚ್ 01 ರಿಂದ 22 ರವರೆಗೆ ನಡೆಸಿತ್ತು.ರಾಜ್ಯದಾದ್ಯಂತ ಸುಮಾರು 6.98 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಮಾ.25ರಿಂದಲೇ ಮೌಲ್ಯಮಾಪನ ಪ್ರಕ್ರಿಯೆ ಆರಂಭಿಸಲಾಗಿತ್ತು.

ಪರೀಕ್ಷೆ ಎಂದಮೇಲೆ ಪಾಸಾಗುವುದು, ಫೇಲಾಗುವುದು ಮಾಮೂಲು. ಆದರೆ ಅದರಾಚೆಗೂ ಜೀವನ ಇದ್ದೇ ಇದೆ. ಕಡಿಮೆ ಅಂಕ ಬಂತೆಂದು ಅಥವಾ ಫೇಲಾದೆ ಎಂದು ದುಃಖಿಸಬೇಡಿ, ಪರೀಕ್ಷೆ ಬರೆಯಲು ಮತ್ತೊಂದು ಅವಕಾಶ ಇದೆ. ಆದರೆ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಂಡರೆ ಜೀವಿಸಲು ಮತ್ತೊಂದು ಅವಕಾಶ ಇಲ್ಲ. ಪಿಯುಸಿಯಲ್ಲಿ ಫೇಲಾದ ಎಷ್ಟೋ ಮಂದಿ ಇದೀಗ ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ, ಬ್ಯುಸಿನೆಸ್‌ ಮಾಡುತ್ತಾರೆ ಎಲ್ಲಾ ಕ್ಷೇತ್ರಗಳಲ್ಲಿಯೂ ಗಳಿಕೆ ಮಾಡುತ್ತಿದ್ದಾರೆ. ಧೃತಿಗೆಡದೆ ಧೈರ್ಯವಾಗಿ ಫಲಿತಾಂಶ ವೀಕ್ಷಿಸಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!